LATEST NEWS
ಹೊಸ ದಾಖಲೆ ಬರೆದ ತಿರುಪತಿ ತಿರುಮಲ ದೇಗುಲ, 20 ತಿಂಗಳಲ್ಲಿ 2 ಸಾವಿರ ಕೋಟಿ ರೂ. ಹುಂಡಿ ಆದಾಯ..!
ತಿರುಪತಿ : ತಿರುಪತಿtirupati ತಿರುಮಲ ದೇಗುಲ ಹೊಸ ದಾಖಲೆಯನ್ನೇ ಬರೆದಿದೆ. ವೆಂಕಟೇಶ್ವರನನ್ನು ಭಕ್ತರು ಎಷ್ಟು ಭಕ್ತಿಯಿಂದ ನಂಬುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ನಿತ್ಯ ಒಂದು ಲಕ್ಷಕ್ಕೂ ಅಧಿಕ ಭಕ್ತರು ಶ್ರೀ ದೇವರ ದರ್ಶಕ್ಕೆ ಆಗಮಿಸುತ್ತಿದ್ದು, ಹುಂಡಿಯ ಆದಾಯವೂ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ. ತಿರುಪತಿ ದೇಗುಲದ ಹುಂಡಿ ಆದಾಯ ಅಭೂತಪೂರ್ವ ರೀತಿಯಲ್ಲಿ ಹಿಂದಿನ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆಯುತ್ತಿದೆ.
ಇತಿಹಾಸದಲ್ಲಿ ಹಿಂದೆಂದೂ ಕಾಣದ ಹುಂಡಿಯ ಆದಾಯ ತಿಂಗಳಿಗೆ ರೂ. 140 ಕೋಟಿ ತಲುಪಿದೆ. ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಸ್ವಾಮಿಯ ಹುಂಡಿಯ ಆದಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿಯೂ ದೇಗುಲದ ಹುಂಡಿಯ ಆದಾಯ ರೂ. 100 ಕೋಟಿ ಗಡಿ ದಾಟಿದೆ..
ಅಕ್ಟೋಬರ್ ತಿಂಗಳಲ್ಲಿ ಹುಂಡಿಯಲ್ಲಿ ಭಕ್ತರು ಅರ್ಪಿಸಿದ 108 ಕೋಟಿ ರೂ. ಸಂಗ್ರಹವಾಗಿದೆ. ಸತತ 20 ತಿಂಗಳುಗಳ ಕಾಲ ತಿರುಪತಿ ದೇಗುಲದಲ್ಲಿ ಹುಂಡಿ ಮೂಲಕ 1000 ಕೋಟಿ ರೂ. ಸಂಗ್ರಹವಾಗಿದ್ದು ದಾಖಲೆ ಬರೆದಿದೆ. ಭಕ್ತರು ಹುಂಡಿಯಲ್ಲಿ ಸಣ್ಣ ನಾಣ್ಯಗಳಿಂದ ಹಿಡಿದು ಕೋಟ್ಯಂತರ ರೂಪಾಯಿಗಳವರೆಗೆ ತಮ್ಮ ಇಷ್ಟಾರ್ಥಗಳನ್ನು ಅರ್ಪಿಸುತ್ತಾರೆ.
You must be logged in to post a comment Login