Connect with us

    LATEST NEWS

    ಮಧ್ಯಪ್ರದೇಶ – ಭೀಕರ ರಸ್ತೆ ಅಪಘಾತ ಹೊತ್ತಿ ಉರಿದ ಬಸ್ ಗೆ 13 ಮಂದಿ ಸಜೀವ ದಹನ

    ಗುನ: ಖಾಸಗಿ ಬಸ್ ಹಾಗೂ ಡಂಪರ್ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ಗೆ ಬೆಂಕಿ ತಗುಲಿ 12 ಮಂದಿ ಸಜೀವ ದಹನವಾದ ಘಟವೆ ಮಧ್ಯಪ್ರದೇಶ ಗುನ ಜಿಲ್ಲೆಯ ಗುಣ-ಅರೋನ್ ಮಾರ್ಗದಲ್ಲಿ ಸಂಭವಿಸಿದೆ. ಬಸ್ ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಬಸ್ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ 12 ಪ್ರಯಾಣಿಕರು ಸಜೀವ ದಹನಗೊಂಡು, 17 ಜನ ಗಾಯಗೊಂಡಿದ್ದಾರೆ.


    ಗಾಯಾಳುಗಳನ್ನು ಗುನ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತರುಣ್ ರಥಿ ತಿಳಿಸಿದ್ದಾರೆ. ಪ್ರಸ್ತುತ 17 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ, ಬಸ್ ಮತ್ತು ಟ್ರಕ್ ಅಪಘಾತದಲ್ಲಿ ಹದಿಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಮೃತದೇಹಗಳು ಬೆಂಕಿಯಲ್ಲಿ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದು, ಅವುಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು. ಅಪಘಾತ ಸ್ಥಳದಿಂದ ಎಲ್ಲಾ ದೇಹಗಳನ್ನು ಹೊರತೆಗೆಯಲಾಗಿದೆ. ಅಪಘಾತಕ್ಕೆ ಕಾರಣವನ್ನು ಕಂಡುಹಿಡಿಯಲು ಪರಿಶೀಲನೆ ಡೆಯುತ್ತಿದೆ ಎಂದು ಅವರು ಹೇಳಿದರು. ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳನ್ನು ಘೋಷಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply