Connect with us

    LATEST NEWS

    ಅಮೇರಿಕಾದಲ್ಲಿ ಭೀಕರ ರಸ್ತೆ ಅಪಘಾತ, ಆಂಧ್ರಪ್ರದೇಶ ಶಾಸಕರ 6 ಮಂದಿ ಸಂಬಂಧಿಕರು ಬಲಿ..!

    ಟೆಕ್ಸಾಸ್ : ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಭಾರತೀಯ ಮೂಲದ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಆಂಧ್ರಪ್ರದೇಶ ಶಾಸಕರೊಬ್ಬರ ಸಂಬಂಧಿಗಳು ಎಂದು ತಿಳಿದು ಬಂದಿದೆ.

     

    ಫೋರ್ಟ್ವರ್ತ್ ಬಳಿಯ ಜಾನ್ಸನ್ ಕೌಂಟಿ ಬಳಿ ಮಂಗಳವಾರ ಸಂಜೆ ಮಿನಿವ್ಯಾನ್ ಮತ್ತು ಪಿಕಪ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆ (ಡಿಪಿಎಸ್) ತಿಳಿಸಿದೆ.

    ಮಿನಿವ್ಯಾನ್ ನಲ್ಲಿದ್ದ ಒಂದೇ ಕುಟುಂಬದ ಏಳು ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಒಬ್ಬರಾದ 43 ವರ್ಷದ ಲೋಕೇಶ್ ಎಂಬುವರು ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.

    ಮೃತರನ್ನು ಜಾರ್ಜಿಯಾದ ಆಲ್ಫಾರೆಟ್ಟಾ ಮೂಲದ 36 ವರ್ಷದ ಮಹಿಳೆ, ನವೀನ ಪೋತಬತುಲಾ (64 ವರ್ಷದ ಪುರುಷ), ನಾಗೇಶ್ವರರಾವ್ ಪೊನ್ನಡ್ (60 ವರ್ಷದ ಮಹಿಳೆ), ಸೀತಾಮಹಾಲಕ್ಷ್ಮಿ ಪೊನ್ನಡ, 10 ವರ್ಷದ ಬಾಲಕ ಕೃತಿಕ್ ಪೋತಬತುಲಾ ಮತ್ತು 9 ವರ್ಷದ ಬಾಲಕಿ ನಿಶಿಧಾ ಪೊಟಬತುಲಾ ಎಂದು ಗುರುತಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply