Connect with us

    LATEST NEWS

    ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಮಾರಾಟ ಜಾಲ ಪತ್ತೆ

    ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಮಾರಾಟ ಜಾಲ ಪತ್ತೆ

    ಮಂಗಳೂರು ಜನವರಿ 17: ಕರ್ನಾಟಕ – ಕೇರಳ ಗಡಿಪ್ರದೇಶವಾಧ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿರುತ್ತಾರೆ.

    ಕೇರಳ ಗಡಿ ಪ್ರದೇಶವಾದ ನೆತ್ತಲಪದವು ಎಂಬಲ್ಲಿ ಮಹಮ್ಮದ್ ಅಜೀಜ್ @ ಅಬ್ದುಲ್ ಅಜೀಜ್ ಮತ್ತು ಇಮ್ತಿಯಾಜ್ ಎಂಬವರು ಆಕ್ಟೀವಾ ಸ್ಕೂಟರ್ ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ರೌಡಿನಿಗ್ರಹದಳದ ಸಿಬ್ಬಂದಿಗಳು ಮತ್ತು ಕೊಣಾಜೆ ಠಾಣೆಯ ಪೊಲೀಸ್ ನಿರೀಕ್ಷಕರೊಂದಿಗೆ ಕಾರ್ಯಾಚರಣೆ ನಡೆಸಿ, ನೆತ್ತಿಲ ಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಕೆ.ಎ.19-ಕ್ಯೂ -1625 ನಂಬ್ರದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.

    ಗಾಂಜಾವನ್ನು ಗ್ರಾಹಕರಿಗೆ ಮಾರಾಟ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ಆರೋಪಿಗಳು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಬೆಲೆ ಸುಮಾರು ರೂ. 1,60,000/- ಎಂದು ಅಂದಾಜಿಸಲಾಗಿದೆ.

    ತಪ್ಪಿಸಿಕೊಂಡ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply