BANTWAL
ಸಾಮರಸ್ಯ ನಡಿಗೆಯ ವೇದಿಕೆ ಹೆಸರಿನಲ್ಲಿ ಫರಕ್, ಸಚಿವ ರೈ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕ್
ಸಾಮರಸ್ಯ ನಡಿಗೆಯ ವೇದಿಕೆ ಹೆಸರಿನಲ್ಲಿ ಫರಕ್, ಸಚಿವ ರೈ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕ್
ಬಂಟ್ವಾಳ,ಡಿಸೆಂಬರ್ 11: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಾಳೆ ಹಮ್ಮಿಕೊಂಡಿರುವ ಸಾಮರಸ್ಯ ನಡಿಗೆಯ ಸಮಾರೋಪ ಸಮಾರಂಭದ ವೇದಿಕೆಯ ಹೆಸರು ಇದೀಗ ಕಾಂಗ್ರೇಸ್ ಕಾರ್ಯರ್ತರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.
ಬಂಟ್ವಾಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರೆನ್ನಲಾದ ಆರೋಪಿಗಳಿಂದ ಕೊಲೆಯಾದ ಹರೀಶ್ ಪೂಜಾರಿ ಹೆಸರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನಾಳಿನ ಸಾಮರಸ್ಯ ನಡಿಗೆಯ ಸಮಾರೋಪ ನಡೆಯುವ ವೇದಿಕೆಗೆ ಇಟ್ಟಿದ್ದಾರೆ.
ಇದರಿಂದ ಕೆರಳಿರುವ ಕೆಲವು ಕಾಂಗ್ರೇಸ್ ಬೆಂಬಲಿತರು ಹಾಗೂ ಕಾಂಗ್ರೇಸ್ ಪಕ್ಷದ ಹಿತೈಷಿಗಳು ತಮ್ಮ ಆಕ್ರೋಶವನ್ನು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟಿದೆ. ಹರೀಶ್ ಪೂಜಾರಿ ಅಸಲಿಗೆ ಕಾಂಗ್ರೇಸ್ ಕಾರ್ಯಕರ್ತನೇ ಅಲ್ಲ.
ಅಂಥವನ ಹೆಸರಿಡುವ ಬದಲಿಗೆ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕಾಗಿ ಹಗಲಿರುಳು ದುಡಿದು ಪ್ರಾಣ ಕೊಟ್ಟ ಕಾಂಗ್ರೇಸ್ ಮುಖಂಡರಾದ ಜಲೀಲ್ ಕರೋಪಾಡಿ ಅಥವಾ ಮಲ್ಲೂರು ಜಬ್ಬಾರ್ ನ ಹೆಸರನ್ನು ಏಕೆ ಇಡಲಿಲ್ಲ ಎನ್ನುವ ಪ್ರಶ್ನೆಯನ್ನು ಈ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ರಮಾನಾಥ ರೈಯವನ್ನು ಕೇಳುತ್ತಿದ್ದಾರೆ.
ಈ ಇಬ್ಬರು ವ್ಯಕ್ತಿಗಳನ್ನು ಕೊಲ್ಲಿಸಿದ್ದು ಯಾರು ? , ಕೊಲೆಯ ಹಿಂದೆ ನಿಮ್ಮ ಹೆಸರೇ ಕೇಳಿ ಬರುತ್ತಿದೆಯಲ್ಲಾ ಎನ್ನುವ ಪ್ರಶ್ನೆಗಳನ್ನೂ ಹಾಕಲಾಗಿದೆ.
ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಾಮರಸ್ಯ ನಡಿಗೆಯಲ್ಲಿ ಜ್ಯಾತ್ಯಾತೀತ ನಿಲುವಿರುವ ಎಲ್ಲಾ ಪಕ್ಷಗಳು ಹಾಗೂ ಸಂಘಟನೆಗಳು ಭಾಗವಹಿಸುವಂತೆ ಕರೆಯನ್ನೂ ಈಗಾಗಲೇ ನೀಡಲಾಗಿದೆ.
ಆದರೆ ಹರೀಶ್ ಪೂಜಾರಿ ಹೆಸರನ್ನು ಬಳಸಿಕೊಳ್ಳುವ ಮೂಲಕ ರೈಗಳು ಸಾಮರಸ್ಯ ನಡಿಗೆಯಲ್ಲೂ ತಮ್ಮ ಓಟಿನ ಬೇಳೆಯನ್ನು ಬೇಯಿಸಿಕೊಳ್ಳಲು ಇತರರನ್ನೂ ಸೇರಿಸಿಕೊಂಡಿರುವುದು ರೈಗಳ ರಾಜಕೀಯ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿಯೂ ಆಗಿದೆ.