Connect with us

DAKSHINA KANNADA

ಹರಿಕೃಷ್ಣ ಬಂಟ್ವಾಳ್ ಹಾಗೂ ಪತ್ನಿಗೆ ಕೊಲೆ ಬೆದರಿಕೆ ಪತ್ರ, ರಮಾನಾಥ ರೈ ಸಹಚರರ ಕೃತ್ಯ ?

ಹರಿಕೃಷ್ಣ ಬಂಟ್ವಾಳ್ ಹಾಗೂ ಪತ್ನಿಗೆ ಕೊಲೆ ಬೆದರಿಕೆ ಪತ್ರ, ರಮಾನಾಥ ರೈ ಸಹಚರರ ಕೃತ್ಯ ?

ಮಂಗಳೂರು,ಜನವರಿ 26: ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಗೆ ಇದೀಗ ಕೊಲೆ ಬೆದರಿಕೆ ಪತ್ರ ಹಾಗೂ ಅವರ ಪತ್ನಿಯನ್ನು ಅತ್ಯಾಚಾರ ಮಾಡುತ್ತೇವೆ ಎನ್ನುವ ಪತ್ರಗಳು ಬರತೊಡಗಿವೆ.

ಕಳೆದ ಒಂದು ವಾರದಿಂದ ಹರಿಕೃಷ್ಣ ಬಂಟ್ವಾಳ ಅವರ ಮನೆಯ ವಿಳಾಸಕ್ಕೆ ಈ ಪತ್ರಗಳು ಬರುತ್ತಿದ್ದು, ಇದರಲ್ಲಿ ಕಾಂಗ್ರೇಸ್ ಬಗ್ಗೆ ಹಾಗೂ ಸಚಿವ ರಮಾನಾಥ ರೈ ಬಗ್ಗೆ ಮಾತನಾಡಿದರೆ ಕೊಲ್ಲುವುದಾಗಿ ಎಚ್ಚರಿಸಲಾಗಿದೆ.

ಇತ್ತೀಚೆಗಷ್ಟೇ ಕಾಂಗ್ರೇಸ್ ನಿಂದ ಹೊರಬಂದು ಬಿಜೆಪಿ ಸೇರಿರುವ ಹರಿಕೃಷ್ಣ ಬಂಟ್ವಾಳ್ ನಿರಂತರವಾಗಿ ಸಚಿವ ರಮಾನಾಥ ರೈ ವಿರುದ್ಧ ತಮ್ಮ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.

ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿಯನ್ನು ಹೀನಾಯವಾಗಿ ನಡೆಸಿಕೊಂಡ ರಮಾನಾಥ ರೈ ವಿರುದ್ಧ ತಿರುಗಿಬಿದ್ದ ಹರಿಕೃಷ್ಣ ಬಂಟ್ವಾಳ ಕಾಂಗ್ರೇಸ್ ತ್ಯಜಿಸಿ ಬಿಜೆಪಿಗೆ ಸೇರಿದ್ದರು.

ಈ ಹಿನ್ನಲೆಯಲ್ಲಿ ಇದೀಗ ಬಂಟ್ವಾಳ್ ಅವರಿಗೆ ಬೆದರಿಕೆ ಪತ್ರಗಳು ಬರಲಾರಂಭಿಸಿದೆ.

ಇದು ಸಚಿವ ರಮಾನಾಥ ರೈ ಗಳ ಜೊತೆ ಇರುವ ಕೆಲವು ಸಹಚರರ ಕೃತ್ಯವಾಗಿದ್ದು, ಇದಕ್ಕೆ ರಮಾನಾಥ ರೈಗಳ ಕುಮ್ಮಕ್ಕು ಇದೆ ಎನ್ನುವ ಆರೋಪವನ್ನು ಇದೀಗ ಹರಿಕೃಷ್ಣ ಬಂಟ್ವಾಳ್ ಮಾಡುತ್ತಿದ್ದಾರೆ.

ರಮಾನಾಥ ರೈ ತನ್ನ ರಾಜಕೀಯ ಹಾಗೂ ಅಧಿಕಾರಕ್ಕಾಗಿ ಇದಕ್ಕಿಂತ ಕೆಟ್ಟ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದು ತನಗೆ ತಿಳಿದಿದೆ ಎನ್ನುವ ಬಂಟ್ವಾಳ್ ಈ ಕುರಿತು ಪೋಲೀಸರಿಗೆ ದೂರು ನೀಡಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ತಿಳಿದೇ ಪೋಲೀಸರಿಗೆ ದೂರು ನೀಡಿಲ್ಲ ಎನ್ನುತ್ತಾರೆ.

ಬಿಜೆಪಿ ಕಾರ್ಯಕರ್ತರೇ ತನ್ನ ಪೋಲೀಸರು ಎನ್ನುವ ಮಾತನ್ನೂ ಬಂಟ್ವಾಳ ಹೇಳುವ ಮೂಲಕ ಇಂಥ ಬೆದರಿಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

VIDEO