DAKSHINA KANNADA
ರಂಗೇರಿಸಿದ ಆಳ್ವಾಸ್ ಗಣರಾಜ್ಯೋತ್ಸವ ಸಂಭ್ರಮ
ರಂಗೇರಿಸಿದ ಆಳ್ವಾಸ್ ಗಣರಾಜ್ಯೋತ್ಸವ ಸಂಭ್ರಮ
ಮೂಡುಬಿದಿರೆ ಜನವರಿ 26 :ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಗಣರಾಜ್ಯೋತ್ಸವ ಆಚರಣೆ ಶುಕ್ರವಾರ ನಡೆಯಿತು.
ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎನ್ ವಿನಯ್ ಹೆಗ್ಡೆ ದ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ದೇಶವು ಆರ್ಥಿಕ ಮುನ್ನಡೆ ಸಾಧಿಸಿದೆ. ಆದರೆ ಮೌಲ್ಯಯುತವಾಗಿ ಹಿನ್ನಡೆ ಅನುಭವಿಸುತ್ತಿರುವುದು ದುರಾದೃಷ್ಟಕರ. ಶಿಸ್ತು, ರಾಷ್ಟ್ರಭಕ್ತಿ, ರಾಷ್ಟ್ರೀಯ ಐಕ್ಯತೆಗೆ ಯುವಜನರು ಶ್ರಮಿಸಿದರೆ ದೇಶ ಪ್ರಗತಿಯತ್ತ ಸಾಗುವುದರಲ್ಲಿ ಸಂಶಯವಿಲ್ಲ. ರಾಷ್ಟ್ರಕೋಸ್ಕರ ಯುವಜನರ ಸಮರ್ಪಣಾ ಭಾವ ದೇಶವನ್ನು ಮೌಲ್ಯಯುತವಾಗಿ ಮುನ್ನಡೆಸುತ್ತದೆ ಎಂದರು.
ಆಳ್ವಾಸ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ದೀಪಾ ಕೊಠಾರಿ ಕಾರ್ಯಕ್ರಮ ನಿರೂಪಿಸಿದರು.
ಸೀನಿಯರ್ ಕೆಡೆಟ್ ಚಾರಿತ್ರ್ಯ ಭಂಡಾರಿ ನೇತೃತ್ವದಲ್ಲಿ ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ 1200ಕ್ಕೂ ಅಧಿಕ ಎನ್‍ಸಿಸಿ ಕೆಡೆಟ್‍ಗಳು ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 26 ಸಾವಿರ ವಿದ್ಯಾರ್ಥಿಗಳು, 450 ಮಂದಿ ಮಾಜಿ ಸೈನಿಕರು, ಮೂಡುಬಿದಿರೆ ನಾಗರಿಕರು, ಆಳ್ವಾಸ್ ಸಿಬ್ಬಂದಿಗಳು ಸೇರಿ ಸುಮಾರು 34 ಸಾವಿರ ಮಂದಿ ಭಾಗವಹಿಸಿದರು.
ಮೊದಲು ವಂದೇ ಮಾತರಂ, ದ್ವಜಾರೋಹಣ, ರಾಷ್ಟ್ರಗೀತೆ ಹಾಡಲಾಯಿತು. ಕೋಟಿ ಕಂಠೋ ಸೇ…ದೇಶಭಕ್ತಿ ಹಾಡುವಾಗ ವಿದ್ಯಾರ್ಥಿಗಳ ಸಹಸ್ರ ಕೈಯಲ್ಲಿದ್ದ ತ್ರಿವರ್ಣ ದ್ವಜಗಳು ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.
You must be logged in to post a comment Login