Connect with us

    MANGALORE

    ಮಂಗಳೂರಿನಲ್ಲಿ 69ನೇ ಗಣರಾಜ್ಯೋತ್ಸವ ಸಂಭ್ರಮ

    ಮಂಗಳೂರಿನಲ್ಲಿ 69ನೇ ಗಣರಾಜ್ಯೋತ್ಸವ ಸಂಭ್ರಮ

    ಮಂಗಳೂರು ಜನವರಿ 26: ಮಂಗಳೂರು ದೇಶದ ಅಖಂಡತೆ, ಸಾರ್ವಭೌಮತೆ, ಸಮಾನತೆಯನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ರಾಷ್ಟ್ರದ ಐಕ್ಯತೆಯನ್ನು ಕಾಪಾಡುವಲ್ಲಿ ಜವಾಬ್ದಾರಿಯುತ ಪಾತ್ರ ವಹಿಸಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕರೆನೀಡಿದ್ದಾರೆ. ಮಂಗಳೂರಿನಲ್ಲಿ ನೆಹರೂ ಮೈದಾನದಲ್ಲಿ 69 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.

    ಸಮಾಜದಲ್ಲಿರುವ ಅತ್ಯಂತ ದುರ್ಬಲರು ಕೂಡ ಬಲಿಷ್ಠರು ಹೊಂದಿರುವ ಅವಕಾಶವನ್ನು ಪಡೆಯಬೇಕು ಎಂಬುದು ಗಾಂಧೀಜಿ ಅವರ ಕಲ್ಪನೆಯ ಪ್ರಜಾಪ್ರಭುತ್ವದ ಆಶಯವಾಗಿತ್ತು. ನಮ್ಮ ರಾಜ್ಯ ಸರ್ಕಾರದ ಉದ್ದೇಶವೂ ಇದೇ ಆಗಿದೆ. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಜೊತೆಗೆ ನಾವು ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಪ್ರಾಮಾಣಿಕವಾಗಿ ಚಿಂತಿಸಬೇಕಾಗಿದೆ.

    ಶಾಂತಿ, ಸಹನೆ, ಸಂಯಮ ನಮ್ಮ ಉಸಿರಾಗಬೇಕು. ಜಾತಿ, ಧರ್ಮ, ಭಾಷೆ, ಪಂಗಡಗಳೆಂಬ ಸಂಕುಚಿತ ಭಾವನೆಯಿಂದ ಹೊರಬರಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮೆಲ್ಲರ ನಿರಂತರ ಗುರಿಯಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
    ಗಣರಾಜ್ಯೋತ್ಸವ ದ ಅಂಗವಾಗಿ 6 ಮಂದಿ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ಟಿ.ಎನ್.ರೇವತಿ, ಗೋಕುಲದಾಸ್ ನಾಯಕ್, ಡಾ.ಗುರುಮೂರ್ತಿ, ಶಿವಪ್ರಕಾಶ್, ಶೇಷಪ್ಪ ಬಂಬಿಲ ಹಾಗೂ ಲಕ್ಷ್ಮಣ ಪೂಜಾರಿ ಇವರಿಗೆ ಉಸ್ತುವಾರಿ ಸಚಿವ ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಿದರು.ಈ ಬಾರಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ 21 ತಂಡಗಳು ಪಾಲ್ಗೊಂಡಿದ್ದವು. ಗಣರಾಜ್ಯೋತ್ಸವ ಪ್ರಯುಕ್ತ ನಗರದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕತಿಕ ವೈಭವ ನಡೆಯಿತು.

    Share Information
    Advertisement
    Click to comment

    You must be logged in to post a comment Login

    Leave a Reply