Connect with us

    LATEST NEWS

    ಮಂಗಳೂರು ಚಲೋ ಗೆ ಭರದ ಸಿದ್ದತೆ, ನಾಯಕರು ಅಜ್ಞಾತ ಸ್ಥಳದಲ್ಲಿ ?

    ಮಂಗಳೂರು ಸೆಪ್ಟೆಂಬರ್ 6: ಹಿಂದೂಪರ ಕಾರ್ಯಕರ್ತರ ಹತ್ಯೆ ಖಂಡಿಸುವುದರೊಂದಿಗೆ,ಎಸ್ ಡಿಪಿಐ, ಪಿಎಫ್ ಐ, ಕೆಎಫ್ ಡಿ ಸಂಘಟನೆಗಳ ಬ್ಯಾನ್ ಗಾಗಿ ಹಾಗೂ ಸಚಿವ ರಮಾನಾಥ ರೈ ಅವರು ರಾಜೀನಾಮೆ ನೀಡಲು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಾಳೆ ಮಂಗಳೂರು ಚಲೋ ಪ್ರತಿಭಟನಾ ಜಾಥಾಕ್ಕೆ ಭರದ ಸಿದ್ದತೆ ನಡೆಯುತ್ತಿದೆ.

    ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಮಂಗಳೂರು ಪೊಲೀಸರು ಸರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಭದ್ರತೆಯ ದೃಷ್ಠಿಯಿಂದ ಇತರ ಜಿಲ್ಲೆಗಳಿಂದ 6 ಎಸ್ಪಿ, ಆರ್ ಎಎಫ್, ಕೆಎಸ್ ಅರ್ ಪಿ, ಸಿಎಆರ್ ಪ್ಲಟೂನ್ ಗಳನ್ನು ಮಂಗಳೂರಿಗೆ ಕರೆಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 2 ದಿನಗಳ ನಿರ್ಬಂಧಕಾಜ್ಞೆಯನ್ನು ಹೇರಿದ್ದಾರೆ.

    ಮಂಗಳೂರು ಕಮೀಷನರ್ ವ್ಯಾಪ್ತಿ ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮದ್ಯದಂಗಡಿ, ಬಾರ್, ವೈನ್ ಶಾಪ್ ಗಳನ್ನು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಮುಚ್ಚಲು ಆದೇಶಿಸಲಾಗಿದೆ.

    ಈ ನಡುವೆ ಬಿಜೆಪಿ ಯುವ ಮೋರ್ಚಾ ದ ವತಿಯಿಂದ ರಾಜ್ಯದ 5 ಭಾಗಳಿಂದ ಮಂಗಳೂರು ಚಲೋ ಪ್ರತಿಭಟನಾ ಬೈಕ್ Rally ಆರಂಭಗೊಂಡಿದೆ. ಬೆಂಗಳೂರು, ಹುಬ್ಬಳ್ಳಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರಿನಿಂದ ಬೈಕ್ Rally ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ಮಾಡಲಿದೆ.

    ಮಂಗಳೂರು ಚಲೋ ಸಿದ್ದತೆ

    ಪೊಲೀಸರು ನಿರ್ಬಂಧಕಾಜ್ಞೆಯ ನಡುವೆ ಇಂದು ರಾತ್ರಿ ಬಿಜೆಪಿ ಕಾರ್ಯಕರ್ತರು ಮಂಗಳೂರು ಚಲೋ ರಾಲಿಗೆ ಸಿದ್ದತೆ ನಡೆಸಿದ್ದಾರೆ. ಗುರುವಾರದಂದು ಮಂಗಳೂರಿನಲ್ಲಿ ನಡೆಯಲಿರುವ ಮಂಗಳೂರು ಚಲೋ ಕಾರ್ಯಕ್ರಮ ಯಶಸ್ವಿಯಾಗಲು ಬೇಕಾದ ಸಕಲ ಸಿದ್ದತೆಗಳನ್ನು ಮಾಡಿದ್ದಾರೆ, ಹೊರಗಿನಿಂದ ಬರುವ ಬಿಜೆಪಿ ಕಾರ್ಯಕರ್ತರನ್ನು ಸ್ವಾಗತಿಸಲು ನಗರದಾದ್ಯಂತ ಹೊರ್ಡಿಂಗ್ಸ್ ಬಂಟಿಂಗ್ಸ್ ಗಳನ್ನು ನಿಲ್ಲಿಸಲಾಗಿದೆ. ಬಿಜೆಪಿಯ ವಿವಿಧ ನಾಯಕರ ಕಟೌಟ್ ಗಳು ನಗರದಾದ್ಯಂತ ರಾರಾಜಿಸುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಬಿಜೆಪಿ ನಾಯಕರುಗಳು ಬಂದಿಳಿದಿದ್ದು , ಅಜ್ಞಾತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

    ರಾಜ್ಯ ಸರಕಾರಕ್ಕೆ ನಿರ್ಬಂಧದ ನಡುವೆಯೂ ಸವಾಲಾಗಿ ಸ್ವೀಕರಿಸಿರುವ ಮಂಗಳೂರು ಚಲೋ ಯಾವ ರೀತಿ ಯಶಸ್ವಿಯಾಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply