Connect with us

LATEST NEWS

‘ ಮಂಗಳೂರು ಚಲೋ ‘ ಕ್ಷಣಗಣನೆ ಆರಂಭ

ಮಂಗಳೂರು ಸೆಪ್ಟೆಂಬರ್ 7: ರಾಜ್ಯಸರಕಾರ ಹಾಗೂ ಬಿಜೆಪಿಯ ಪ್ರತಿಷ್ಠೆ ಪ್ರಶ್ನೆಯಾಗಿರುವ ಮಂಗಳೂರು ಚಲೋ ಗೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾವನ್ನು ತಡೆಯಲು ಮಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ.

ನಗರದ ಜ್ಯೋತಿ ವೃತ್ತದಿಂದ  11 ಗಂಟೆಗೆ ಪ್ರತಿಭಟನಾ ಬೈಕ್ ಜಾಥಾ ನಡೆಯಲಿದ್ದು ಜಾಥಾ ಮೂಲಕ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕುವ ಪ್ಲಾನ್ ಬಿಜೆಪಿ ಮುಖಂಡರದ್ದು.

ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ 

ಆದರೆ ಈಗಾಗಲೇ ಪೊಲೀಸ್ ಇಲಾಖೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35(3) ರಡಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ  ಜಾರಿಗೊಳಿಸಿದೆ. ಈ ಪರಿಣಾಮ ನಗರದಲ್ಲಿ ಯಾವುದೇ ಸಂಘಟನೆ ಜಾಥಾ, ಪಾದಯಾತ್ರೆ ,ಮೆರವಣಿಗೆ ಮಾಡುವುದನ್ನು ನಿಷೇಧಿಸಿದಂತಾಗಿದೆ.

ಆದರೆ ಬಿಜೆಪಿ ಈ ನಿಷೇಧಾಜ್ಞೆ ಉಲ್ಲಂಘಿಸಲು ಸಿದ್ಧವಾಗಿದ್ದು ತಂತ್ರ ಪ್ರತಿತಂತ್ರ ರೂಪಿಸಿದೆ. ಪೊಲೀಸರ ಭದ್ರಕೋಟೆಯನ್ನು ಭೇದಿಸಿ ಪ್ರತಿಭಟನಾ ಜಾಥಾ ನಡೆಸಲು ಬಿಜೆಪಿ ಮುಖಂಡರು ರೂಪುರೇಷೆ ಸಿದ್ಧಪಡಿಸಿದ್ದಾರೆ ಈಗಾಗಲೇ ಹಲವಾರು ಬಿಜೆಪಿ ಮುಖಂಡರು ಮಂಗಳೂರಿಗೆ ಆಗಮಿಸಿದ್ದು ರಹಸ್ಯ ಸ್ಥಳಗಳಲ್ಲಿ ಠಿಕಾಣಿ ಹೂಡಿದ್ದಾರೆ .

ಬಿಜೆಪಿ ಬೈಕ್ ಜಾಥಾ ಹೊರಡುವ ಜ್ಯೋತಿ ವೃತ್ತದಲ್ಲಿ ಪೊಲೀಸರ ಬಿಗಿ ಪಹರೆ ಹಾಕಲಾಗಿದೆ. ನಗರ ಪ್ರವೇಶಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ . ನಗರ ಪ್ರವೇಶಿಸುವ ಬೈಕ್ ಸವಾರರನ್ನು ಪರಿಶೀಲನೆ ನಡೆಸಲಾಗುತ್ತಿದೆ. ನಗರದಲ್ಲಿ ಆರ್ ಎ ಎಫ್ ,ಸಿಎಆರ್ , ಕೆಎಸ್ಆರ್ ಪಿ ಪ್ಲಾಟೂನ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ನಗರದಲ್ಲಿ ಇಂದು ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ .

ಪೊಲೀಸ್ ಸರ್ಪಗಾವಲು

Advertisement
Click to comment

You must be logged in to post a comment Login

Leave a Reply