Connect with us

LATEST NEWS

ಬ್ರಾಹ್ಮಣರ ವೃತ್ತಿಯ ಅವಹೇಳನ – ಜೀ ಕನ್ನಡ ವಾಹಿನಿ ಈ ಕೂಡಲೇ ಕ್ಷಮೆ ಕೇಳುವಂತೆ ಒತ್ತಾಯ

ಉಡುಪಿ ಅಗಸ್ಟ್ 09 : ಜೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ ಕಾರ್ಯಕ್ರಮದ ವಿರುದ್ದ ಇಂದು ಉಡುಪಿಯ ಪೇಜಾವರ ಮಠದಲ್ಲಿ ಪ್ರತಿಭಟನಾ ಸಭೆ ನಡೆಯಿತು.  ಯುವ ಬ್ರಾಹ್ಮಣ ಪರಿಷತ್  ನೇತೃತ್ವದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಅದೇ ರೀತಿ ಮುಂದಿನ ಸಂಚಿಕೆಯಲ್ಲಿ ಜೀ ವಾಹಿನಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಬ್ರಾಹ್ಮಣರ ವೃತ್ತಿಯ ಅವಹೇಳನಮಾಡಲಾಗಿದೆ ಇದು ನಮಗೆ ದುಃಖ ಉಂಟು ಮಾಡಿದೆ ಎಂದು ಹೇಳಿದರು. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಮಾಡದಿರಿ ಎಂದು ಅವರು ಕರೆ ನೀಡಿದರು. ಇದನ್ನು ನಾವು ಸರ್ವತಾ ಒಪ್ಪಲು ಸಾಧ್ಯವಿಲ್ಲ ಜೀ ಕನ್ನಡ ವಾಹಿನಿ ಈ ಕೂಡಲೇ ಕ್ಷಮೆ ಯಾಚಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು .

ಕನ್ನಡದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ವೃತ್ತಿಗೆ ಅವಹೇಳನ ಮಾಡಿರುವುದರ ವಿರುದ್ಧ ಹೋರಾಟ ಪ್ರತಿಭಟನೆಗಳು ಆರಂಭವಾಗಿದೆ. ಉಡುಪಿಯಲ್ಲೂ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

 

Advertisement
Click to comment

You must be logged in to post a comment Login

Leave a Reply