ಪುತ್ತೂರು, ಅಗಸ್ಟ್ 09 : ಬ್ಲೂಫಿಲ್ಮ ವಿಚಾರವನ್ನಿಟ್ಟುಕೊಂಡು ಬಿಜೆಪಿ ಪಕ್ಷದ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಪಕ್ಷದ ಬ್ಲಾಕ್ ಮಟ್ಟದ ಅಧ್ಯಕ್ಷರೊಬ್ಬರು ಪಕ್ಷಕ್ಕೆ ಸಂಬಂಧಪಟ್ಟ ಅಧಿಕೃತ ವಾಟ್ಸ್ ಅಪ್ ಗ್ರೂಪ್ ನಲ್ಲಿ ಬ್ಲೂಫಿಲ್ಮ್ ಪೋಸ್ಟ್ ಹಾಕುವ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಮುಜುಗರ ತಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಫಜಲ್ ರಹೀಂ ಕಾಂಗ್ರೇಸ್ ಪಕ್ಷದ ಶಾಸಕರೂ, ಸರ್ಕಾರದಲ್ಲಿ ಕ್ಯಾಬಿನೆಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಇರುವಂತಹ ಬಿ. ರಮಾನಾಥ ರೈ ಗೆಳೆಯರ ಬಳಗ ಎನ್ನುವ ವಾಟ್ಸ್ ಅಪ್ ಗ್ರೂಪ್ ನಲ್ಲಿ ಈ ಕೊಳಕು ನೀಲಿ ಚಿತ್ರದ ಪೋಸ್ಟ್ ಮಾಡಿದ್ದಾರೆ. ಈ ವಾಟ್ಸ್ ಅಪ್ ಗ್ರೂಪಿನಲ್ಲಿ ಸಚಿವ ರಮಾನಾಥ ರೈ ಅವರದೇ ಡಿಪಿ ಇದೆ. ಜಿಲ್ಲೆಯಲ್ಲೇ ಅಲ್ಲದೆ ರಾಜ್ಯ ಮಟ್ಟದಲ್ಲೂ ಭಾರೀ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿದೆ. ಸ್ವತಹ ಪಕ್ಷದ ಕಾರ್ಯಕರ್ತರೇ ಪೋಸ್ಟ್ ಹಾಕಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಿಗೆ ಗ್ರೂಪ್ ನಲ್ಲೇ ಮಂಗಳಾರತಿ ಮಾಡಿದ್ದಾರೆ ಮತ್ತು ಈ ವಿಚಾರವನ್ನು ಪಕ್ಷದ ಹೈಕಮಾಂಡ್ ಗೂ ತಲುಪಿಸುವ ಹಂತಕ್ಕೆ ಬಂದಿದ್ದಾರೆ. ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪು, ಕಳುಹಿಸುವುದು ತಪ್ಪು ಎನ್ನುವ ಮೂಲಕ ಬಿಜೆಪಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಪಕ್ಷಕ್ಕೆ ತನ್ನದೇ ಪಕ್ಷದ ಜವಾಬ್ದಾರಿ ಹೊತ್ತ ಬ್ಲಾಕ್ ಅಧ್ಯಕ್ಷ ಈ ರೀತಿ ಮಾಡಿರುವುದು ಮುಜುಗರವನ್ನುಂಟು ಮಾಡಿದೆ. ಕಾಂಗ್ರೇಸ್ ಮಹಿಳಾ ಪದಾಧಿಕಾರಿಗಳು ಸೇರಿದಂತೆ ಮಹಿಳಾ ಕಾರ್ಯಕರ್ತೆಯರೂ ಇರುವ ಈ ಗ್ರೂಪ್ ನಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷನ ಅವಾಂತರ ಭಾರೀ ಚರ್ಚೆಗೂ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕಿ ಶಕುಂತಲ ಶೆಟ್ಟಿ ಈ ಬಗ್ಗೆ ಪ್ರತಿಕ್ರೀಯಿಸಿದ್ದಾರೆ.ಬೇರೆಯವರ ಬಗ್ಗೆ ಬೊಟ್ಟು ಮಾಡಿ ತೋರಿಸುವ ನಾವು ಕಾಂಗ್ರೆಸಿಗರೇ ಈ ರೀತಿಯ ಪೋಸ್ಟ್ ಗಳನ್ನು ಹಾಕುವುದು ಎಷ್ಟು ಸರಿ ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕೆಂದ ಅವರು ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದಿದ್ದಾರೆ.

Facebook Comments

comments