Connect with us

  FILM

  ಆಗಸ್ಟ್ 11 ಕ್ಕೆ ” ಅರೆಮರ್ಲೇರ್ “

  ಮಂಗಳೂರು,ಆಗಸ್ಟ್ 09 : ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ “ಅರೆಮರ್ಲೇರ್ ‘ ತುಳು ಸಿನೆಮಾ ಆ. 11ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ನಿರ್ದೇಶಕ ದೇವದಾಸ್‌ ಕಾಪಿಕಾಡ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಕರಾವಳಿಯ 13 ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದ್ದು ,ಮಂಗಳೂರಿನ ಪ್ರಭಾತ್‌, ಸಿನೆಪೊಲಿಸ್‌, ಬಿಗ್‌ ಸಿನೆಮಾಸ್‌, ಪಿವಿಆರ್‌, ಉಡುಪಿಯಲ್ಲಿ ಕಲ್ಪನಾ, ಮೂಡಬಿದಿರೆಯ ಅಮರಶ್ರೀ, ಕಾರ್ಕಳದ ರಾಧಿಕಾ, ಪ್ಲಾನೆಟ್‌, ಪುತ್ತೂರಿನ ಅರುಣಾ, ಸುರತ್ಕಲ್‌ನ ನಟರಾಜ್‌, ಬೆಳ್ತಂಗಡಿಯ ಭಾರತ್‌, ಸುಳ್ಯದ ಸಂತೋಷ್‌ ಹಾಗೂ ಮಣಿಪಾಲದ ಐನಾಕ್ಸ್‌ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಸಿನೆಮಾ ಸಂಪೂರ್ಣ ಹಾಸ್ಯ-ಮನೋರಂಜನೆಯಿಂದ ಕೂಡಿದೆ ಎಂದ ಅವರು ಈಗಾಗಲೇ ಬಿಡುಗಡೆಗೊಂಡಿರುವ ಸಿನೆಮಾದ ಪೋಸ್ಟರ್‌ಗಳು ಜನರನ್ನು ಆಕರ್ಷಿಸಿವೆ. ಈ ಹಿಂದೆ ತೆಲಿಕೆದ ಬೊಳ್ಳಿ, ಚಂಡಿಕೋರಿ, ಬರ್ಸ,ಸಿನೆಮಾ ರೀತಿಯಲ್ಲೇ ಅರೆ ಮರ್ಲೇರ್ ನಲ್ಲಿ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಅರ್ಜುನ್‌ ಕಾಪಿಕಾಡ್‌ ಈ ಬಾರಿ ವಿಶಿಷ್ಟ ಪಾತ್ರದ ಮೂಲಕ ಗಮನ ಸೆಳೆಯಲಿದ್ದು, ಅವರಿಗೆ ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು ಸಾಥ್‌ ನೀಡಿದ್ದಾರೆ ಎಂದರು. “ಅರೆಮರ್ಲೆರ್‌’ ಚಿತ್ರದ ಕೆಮರಾಮನ್‌ ಆಗಿ ಉದಯ ಬಲ್ಲಾಳ್‌, ಸುಜೀತ್‌ ನಾಯಕ್‌ ಸಂಕಲನಕಾರರಾಗಿ, ಮಣಿಕಾಂತ್‌ ಕದ್ರಿ ಹಿನ್ನೆಲೆ ಸಂಗೀತದಲ್ಲಿ ದುಡಿದಿದ್ದಾರೆ. ಸಚಿನ್‌ ಎ.ಎಸ್‌. ಉಪ್ಪಿನಂಗಡಿ ಕಾರ್ಯಕಾರಿ ನಿರ್ಮಾಣ, ರಾಜೇಶ್‌ ಕುಡ್ಲ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದೇವದಾಸ್‌ ಕಾಪಿಕಾಡ್‌ ವಹಿಸಿಕೊಂಡಿದ್ದಾರೆ.ಲಕ್ಷ್ಮಣ ಕುಮಾರ್‌ ಮಲ್ಲೂರು, ಸರೋಜಿನಿ ಶೆಟ್ಟಿ, ಗೋಪಿನಾಥ್‌ ಭಟ್‌, ಅರ್ಜುನ್‌ ಕಜೆ, ಚೇತನ್‌ ರೈ ಮಾಣಿ, ಸಾಯಿಕೃಷ್ಣ , ಸತೀಶ್‌ ಬಂದಲೆ, ಹರೀಶ್‌ ವಾಸು ಶೆಟ್ಟಿ ಮುಂಬಯಿ, ಗಿರೀಶ್‌ ಶೆಟ್ಟಿ ಕಟೀಲು, ತಿಮ್ಮಪ್ಪ ಕುಲಾಲ್‌, ಸುರೇಶ್‌ ಕುಲಾಲ್‌, ಸುನೀಲ್‌ ನೆಲ್ಲಿಗುಡ್ಡೆ, ಸಂದೀಪ್‌ ಶೆಟ್ಟಿ, ಪ್ರಸನ್ನ ಶೆಟ್ಟಿ, ಪಾಂಡುರಂಗ ಅಡ್ಯಾರ್‌, ಚಿದಾನಂದ ದುಬೈ ಅಭಿನಯಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply