ಸೌದಿ, ಆಗಸ್ಟ್ 05 : ಸಂಪ್ರದಾಯವಾದಿಗಳ ನಾಡಿನಲ್ಲಿ ‘ಕರಿ ಪರದೆ’ಯ ಹಿಂದೆ ಅವಿತೇ ಬದುಕುತ್ತಿದ್ದ ಮಹಿಳೆಗೀಗ ಸ್ವಾತಂತ್ರ್ಯದ ಅನುಭವ. ಮೈ ಚರ್ಮ ಚೂರು ಕೂಡ ಕಾಣದಂತೆ ಬಟ್ಟೆ ತೊಟ್ಟು, ಅಸ್ತಿತ್ವದಲ್ಲಿದ್ದೂ ಅಜ್ಞಾತದಲ್ಲಿ ದಿನ ದೂಡುತ್ತಿದ್ದ ಸ್ತ್ರೀಯರಿನ್ನು ಬಿಕಿನಿ ಧರಿಸಿ ಬೀಚ್‌ನಲ್ಲಿ ಸುತ್ತಾಡಬಹುದಂತೆ ..!  ಇಂಥ ಅಚ್ಚರಿ ಬೆಳವಣಿಗೆಗೆ ಕಾರಣ ಸೌದಿ ಅರೇಬಿಯದಲ್ಲಿನ ‘ರೆಡ್‌ ಸೀ ರೆಸಾರ್ಟ್‌’.
ಇದು ಸೌದಿ ಅರೇಬಿಯಾದ ಮಹಿಳೆಯರಿಗೆ ಸಿಕ್ಕಿದ ‘ಅರೆಕಾಲಿಕ ಸ್ವಾತಂತ್ರ್ಯ’. ಇಷ್ಟೊಂದು ಮುಕ್ತಾ ಮುಕ್ತ ಅವಕಾಶ ನೀಡುವುದರ ಹಿಂದೆ ಕೂಡ ಬಲವಾದ ಕಾರಣ ಇದೆ ಮತ್ತು  ವಾಣಿಜ್ಯ ಉದ್ದೇಶ ಅಡಗಿದೆ. ಸಂಪ್ರದಾಯದ ಬಟ್ಟೆಯನ್ನು ಕಳಚಿ ಕೊಂಚ ಪಕ್ಕಕ್ಕಿರಿಸಿದ ದುಬೈ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗಾಧವಾಗಿ ಬೆಳೆದದ್ದನ್ನು ಕಣ್ಣಾರೆ ಕಂಡು ದಂಗಾದ ಸೌದಿ ದೊರೆ ಮಹಮ್ಮದ್‌ ಬಿನ್‌ ಸಲ್ಮಾನ್‌, ಸೌದಿಯ ವಾಯವ್ಯ ಕರಾವಳಿಯಲ್ಲಿನ ಬೀಚ್‌ನಲ್ಲಿ ಐಷಾರಾಮಿ ರೆಡ್‌ ಸೀ ರೆಸಾರ್ಟ್‌ ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಬೀಚ್‌ ರೆಸಾರ್ಟ್‌ಗೆ ಭೇಟಿ ನೀಡುವ ಮುಸ್ಲಿಂ ಮಹಿಳೆಯರು ಬುರ್ಖಾ ಬದಲಿಗೆ ತಮ್ಮಿಷ್ಟದ ಉಡುಗೆ ಧರಿಸಬಹುದಂತೆ ಮತ್ತು ಸ್ಚಚಂದವಾಗಿ ಬೇಕಿದ್ದರೆ ಬಿಕಿನಿ ಧರಿಸಿ ಸಮುದ್ರ ತಟದಲ್ಲಿ ಸುತ್ತಾಡಬಹುದು ಎಂದು ಸೌದಿ ಸರ್ಕಾರದ ನಿಯಮ ಹೇಳುತ್ತದೆ. ಆದರೆ ಪುರುಷರ ಪ್ರವೇಶ  ಮಾತ್ರ ಇಲ್ಲಿ ನಿಷಿದ್ದ. ಈ  ರೆಡ್ ಸೀ ರೆಸಾರ್ಟನ್ನು ಮಧ್ಯಪ್ರಾಚ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿಸುವ ಉದ್ದೇಶ ಹೊಂದಿರುವ ದೊರೆ ಸಲ್ಮಾನ್‌, ಮಹಿಳೆಯರಿಗೆ ತುಂಡುಡುಗೆ ತೊಡಲುವಕಾಶ ನೀಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ದಾಳವಾಗಿ ಬಳಸುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಅದೆನೇ ಇದ್ದರೂ ಸಂಪ್ರದಾಯಗಳನ್ನು ಕಟ್ಟು ನಿಟ್ಟಾಗಿ ಆಚರಿಸುತ್ತಿದ್ದ ಸೌದಿ ಇದೀಗ ಆಧುನಿಕ ಜಗತ್ತಿನಂತ ಮುಖ ಮಾಡಿರುವುದು ಮಾತ್ರ ಸತ್ಯ.

Facebook Comments

comments