DAKSHINA KANNADA
ಕೆ.ಎಸ್.ಆರ್.ಟಿ.ಸಿ ಚಾಲಕನ ರಾಂಗ್ ರೂಟ್ ಚಾಲನೆಗೆ ಬಿತ್ತು ಧರ್ಮದೇಟು. ಏನೀ ರಾಂಗ್ ರೂಟ್ ? ಸ್ಟೋರಿ ನೋಡಿ
ಕೆ.ಎಸ್.ಆರ್.ಟಿ.ಸಿ ಚಾಲಕನ ರಾಂಗ್ ರೂಟ್ ಚಾಲನೆಗೆ ಬಿತ್ತು ಧರ್ಮದೇಟು. ಏನೀ ರಾಂಗ್ ರೂಟ್ ? ಸ್ಟೋರಿ ನೋಡಿ
ಪುತ್ತೂರು,ಮಾರ್ಚ್ 18: ರಸ್ತೆಯಲ್ಲಿ ಬಸ್ ಚಲಾಯಿಸಬೇಕಿದ್ದ ಚಾಲಕನೋರ್ವ ರಾಂಗ್ ರೂಟ್ ನಲ್ಲಿ ನುಗ್ಗಿ ಯುವಕರಿಂದ ಧರ್ಮದೇಟು ತಿಂದ ಘಟನೆ ಪುತ್ತೂರಿನ ಪೋಳ್ಯ ಎಂಬಲ್ಲಿ ನಡೆದಿದೆ.
ಹೈದರಾಬಾದ್ ಕರ್ನಾಟಕ ಮೂಲದ ಪುತ್ತೂರು ಕೆ.ಎಸ್.ಆರ್.ಟಿ.ಸಿ ಘಟಕದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಮುನೀರ್ ಎಂಬ ಚಾಲಕ ಪೋಳ್ಯದಲ್ಲಿರುವ ಮಂತ್ರವಾದಿಯೋರ್ವರ ಮಡದಿಯ ಜೊತೆಗೆ ಹೊಂದಿರುವ ಸಂಪರ್ಕವೇ ಈ ರಾಂಗ್ ರೂಟ್ ಚಾಲನೆಯಾಗಿದೆ.
ಕೆಲವು ತಿಂಗಳ ಹಿಂದೆ ಪೋಳ್ಯ ಸಮೀಪದ ಕಡಮೆಮಜಲು ಎಂಬಲ್ಲಿ ಈ ಮಂತ್ರವಾದಿ ನೆಲೆಸಿದ್ದಾರೆ.
ಇದೇ ರೂಟ್ ನಲ್ಲಿ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮುನೀರ್ ಮಂತ್ರವಾದಿ ಇಲ್ಲದ ಸಮಯದಲ್ಲಿ ಮಂತ್ರವಾದಿಯ ಮನೆಗೆ ಆಗಾಗ ಬರುತ್ತಿರುವುದು ಸ್ಥಳೀಯ ಯುವಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಚಾಲಕ ಮುನೀರ್ ಗೆ ಮಂತ್ರವಾದಿಯ ಮನೆಯಲ್ಲಿ ಅದು ಕೂಡಾ ಮಂತ್ರವಾದಿ ಇಲ್ಲದ ಸಮಯದಲ್ಲಿ ಏನು ಕೆಲಸ ಎಂದು ತಲೆ ತುರಿಸಿಕೊಳ್ಳುತ್ತಿದ್ದ ಯುವಕರು ಮಾರ್ಚ್ 15 ರಂದು ಕೊನೆಗೂ ಇದರ ರಹಸ್ಯ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಚಾಲಕ ಮುನೀರ್ ಗೆ ಮಂತ್ರವಾದಿಯ ಮಡದಿ ಜೊತೆ ಅನ್ಯೋನ್ಯ ಸಂಬಂಧವಿದ್ದ ಕಾರಣ ಆತ ಮಂತ್ರವಾದಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡುತ್ತಿದ್ದ.
ಅದೇ ರೀತಿ ಮಾರ್ಚ್ 15 ರಂದೂ ಭೇಟಿ ನೀಡಿದ್ದ ಮುನೀರ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯ ಯುವಕರು ಆತನಿಗೆ ಚೆನ್ನಾಗಿ ಧರ್ಮದೇಟು ನೀಡಿದ್ದಾರೆ.
ಬಳಿಕ ಆತನನ್ನು ಪುತ್ತೂರು ನಗರ ಪೋಲೀಸರ ವಶಕ್ಕೆ ನೀಡಿದ್ದಾರೆ. ಆದರೆ ಪುತ್ತೂರು ನಗರ ಪೋಲೀಸರು ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸದೆ ತಮ್ಮೊಳಗೇ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ.
You must be logged in to post a comment Login