DAKSHINA KANNADA
ಅಪ್ರಾಪ್ತೆಗೆ ಮೊಬೈಲಿನಲ್ಲಿ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ : ಪುತ್ತೂರಿನ ಸಂಷೇರನ ಬಂಧನ
ಅಪ್ರಾಪ್ತೆಗೆ ಮೊಬೈಲಿನಲ್ಲಿ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ : ಪುತ್ತೂರಿನ ಸಂಷೇರನ ಬಂಧನ
ಪುತ್ತೂರು, ಎಪ್ರಿಲ್ 25 : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಪುತ್ತೂರು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪುತ್ತೂರು ಕಸಬಾ ಗ್ರಾಮದ ಮುರ ನಿವಾಸಿ ಶಂಷೇರ್ ಖಾನ್ (50).
ಕಳೆದ ಒಂದು ವರ್ಷದಿಂದ ನೆರೆ ಮನೆಯ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದನು ಈತ.
ಈತ ಬಾಲಕಿಗೆ ಮೊಬೈಲ್ ನಲ್ಲಿ ಲೈಂಗಿಕ ಸಿನಿಮಾ ತೋರಿಸುತ್ತಿದ್ದ ಮತ್ತು ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಂಷೇರ್ ಖಾನ್ ಎಂದು ಆರೋಪಿಸಲಾಗಿದ್ದು, ಆರೋಪಿ ವಿರುದ್ಧ ಫೋಸ್ಕೋ ಪ್ರಕರಣ ದಾಖಲಿಸಲಾಗಿದೆ.
ಬಂಧನ ಬಳಿಕ ಲಾಕಪ್ ಒಳಗೆ ಸಂಷೇರ್ ಖಾನ್ ಹೈಡ್ರಾಮ ನಡೆಸಿದ್ದಾನೆ.
ಪೋಲಿಸ್ ಠಾಣೆಯಲ್ಲಿ ಲಾಕಪ್ ಕಂಬಿಗಳಿಗೆ ತಲೆ ಜಜ್ಜಿಕೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದು, ತಲೆಗೆ ಗಾಯಗಳಾದ ಕಾರಣ ಸಂಷೇರನನ್ನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
You must be logged in to post a comment Login