Connect with us

BANTWAL

ಮರಗಳ್ಳನ ಜೊತೆ ರಾಜಕಾರಣಿ ನಂಟು- ಬಹಿರಂಗಗೊಂಡಿದೆ ಸಂಬಾಷಣೆಯ ಗುಟ್ಟು

ಬಂಟ್ವಾಳ, ಜುಲೈ.18 : ಜನಪ್ರತಿನಿಧಿಯೊಬ್ಬರು ಮರಗಳ್ಳನ ಜೊತೆ ಫೋನ್ ನಲ್ಲಿ ಸಂಭಾಷಣೆ ಮಾಡುವಂತಹ ಧ್ವನಿ ಮುದ್ರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಧ್ವನಿ ಮುದ್ರಣದಲ್ಲಿ ಜನಪ್ರತಿನಿಧಿ ಮರಗಳ್ಳನಲ್ಲಿ ಮರ ಕಡಿದು ಸಾಗಿಸಲು ತನಗೆ ಕಮಿಷನ್ ನೀಡಬೇಕು ಎನ್ನುವ ಸಂಭಾಷಣೆ ಜೊತೆಗೆ ತನಗೆ ಅರಣ್ಯ ಸಚಿವ ಬಿ.ರಮಾನಾಥ ರೈ ಗಳ ಸಂಪರ್ಕವೂ ಇದೆ ಎಂದು ಹೇಳಿಕೊಳ್ಳುವುದು ಕೂಡ ಈ ಸಂಭಾಷಣೆಯಲ್ಲಿ ಬಹಿರಂಗಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮಪಂಚಾಯತ್ ನ ಸದಸ್ಯ ಮಾಧವ ಕಾರ್ಬೆಟ್ಟು ಈ ರೀತಿ ಸಂಭಾಷಣೆ ನಡೆಸುತ್ತಿರುವ ವ್ಯಕ್ತಿಯಾಗಿದ್ದು, ಮರಗಳ್ಳನೊಬ್ಬ ಇವರಿಗೆ ಫೋನ್ ಮುಖಾಂತರ ಸಂಭಾಷಣೆ ನಡೆಸಿದ ಧ್ವನಿ ಮುದ್ರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕರೆ ಮಾಡಿದ ವ್ಯಕ್ತಿಯು ತಾನು ಮರ ಕಡಿಯುವವ ಎಂದು ಪರಿಚಯಿಸಿದ್ದು ಬಳಿಕ ರಸ್ತೆಯ ಪಕ್ಕದಲ್ಲಿರುವ ಮರ ಹಾಗೂ ಅದರ ಜೊತೆಗೆ ಬೆಲೆ ಬಾಳುವ ಮರಗಳೂ ಇವೆ, ಅದನ್ನು ಕಡಿದು ಸಾಗಿಸಲು ತಮ್ಮ ಸಹಕಾರ ಬೇಕು, ನಿಮಗೆ ಎಷ್ಟು ಕೊಡಬೇಕು ಎಂದು ಕೇಳುತ್ತಿರುವುದು. ಈ ಕಡೆಯಿಂದ ಮಾತನಾಡಿದ ಮಾಧವ್ ಕಾರ್ಬೆಟ್ಟು ನೀವು ಮರ ಕಡಿದು ಕೊಂಡೊಯ್ಯಿರಿ, ಆದರೆ ನಮಗೆ ಕಮಿಷನ್ ಕೊಡಬೇಕು. ಮೋನು ಎಂಬವರಿಗೆ ನಮ್ಮ ವಿಚಾರ ಗೊತ್ತಿದೆ, ಅವರೇ ಇದೆಲ್ಲದರ ಡೀಲ್ ಮಾಡುವವರು ಎಂದಿದ್ದಾರೆ. ಅಲ್ಲದೆ ನಾನೀಗ ಬಿಜೆಪಿ ಪಕ್ಷದಲ್ಲಿದ್ದೇನೆ, ಆದರೆ ನಮಗೆ ಪಕ್ಷ ರಾಜಕೀಯಕ್ಕೆ ಮಾತ್ರ ,ಚುನಾವಣೆ ನಡೆದ ಬಳಿಕ ನಾವೆಲ್ಲಾ ಒಂದೇ ಎನ್ನುವುದನ್ನು ಹೇಳುತ್ತಿದ್ದಾರೆ. ಅರಣ್ಯ ಸಚಿವ ರಮಾನಾಥ ರೈ ಜೊತೆಗೆ ತನಗೆ ನಿಕಟ ಸಂಬಂಧವೂ ಇದೆ ಎನ್ನುತ್ತಿರುವ ಈ ವ್ಯಕ್ತಿ ಪ್ರೇಮಾನಂದ ಶೆಟ್ಟಿ ಎನ್ನುವ ಹೆಸರನ್ನೂ ಹೇಳುತ್ತಿದ್ದು, ತನಗೆ ಕರೆ ಮಾಡಿದ ಮರಗಳ್ಳನಿಗೆ ನೀವು ಶೆಟ್ರಿಗೆ ಕಾಲ್ ಮಾಡಿ ಅವರನ್ನು ಮೀಟ್ ಆಗಿ ಎನ್ನುವ ಸಂಭಾಷಣೆ ರೆಕಾರ್ಡ್ ಆಗಿದೆ. ಸಂಭಾಷಣೆಯಲ್ಲಿ ಗುರುತಿಸಲ್ಪಟ್ಟಿರುವ ಮಾಧವ್ ಕಾರ್ಬೆಟ್ಟು ಇಂದು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದು, ಹಾಗೂ ಸ್ವತಹ ಅರಣ್ಯ ಸಚಿವ ರಮಾನಾಥ ರೈಗಳೇ ಇವರನ್ನು ಪಕ್ಷಕ್ಕೆ ಆಹ್ವಾನಿಸಿರುವುದು ಇದೀಗ ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.

ಈ ಸಂಭಾಷಣೆಯ ಆಡಿಯೋ ಕೇಳಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *