Connect with us

DAKSHINA KANNADA

ನಿಲುಕದ ನಕ್ಷತ್ರ ಚಿತ್ರ ತೆರೆಗೆ ಸಿದ್ಧ

ನಿಲುಕದ ನಕ್ಷತ್ರ ಚಿತ್ರ ತೆರೆಗೆ ಸಿದ್ಧ

ಮಂಗಳೂರು, ಫೆಬ್ರವರಿ 28: ರುದಿರಾ ಫಿಲ್ಮ್ಸ್ ಇವರ ಬ್ಯಾನರ್’ನಲ್ಲಿ ಸಿದ್ದವಾಗಿದೆ ನಿಲುಕದ ನಕ್ಷತ್ರ ಬಿಡುಗಡೆಯ ಹಾದಿಯಲ್ಲಿದೆ.

ಬಹು ನಿರೀಕ್ಷಿತ ಈ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿದ್ದು, ವಿಭಿನ್ನ ಕಥಾಹಂದರ ಹೊಂದಿರುವ, ನೈಜ ನಿರೂಪಣೆಯೊಂದಿಗೆ ಹೊಸತನವಿರುವ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನ ಮುಟ್ಟಲಿದೆ ಎಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೊಸ ಪ್ರತಿಭೆಗಳೇ ಅಭಿನಯಿಸಿರುವ ಈ ಚಿತ್ರಕ್ಕೆ ಆನಂದ್ ಅನಿ ಬೆಂಗಳೂರು, ವಿನ್ಸೆಂಟ್ ಡಿಸೋಜ ಹಾಗೂ ಸುಶಾನ್ ರೈ ಮಾವಿನಕಟ್ಟೆ ನಿರ್ಮಾಪಕರಾಗಿದ್ದು, ಧನರಾಜ್ ಶೆಟ್ಟಿ ಮತ್ತು ಪ್ರಸನ್ನ ಎಸ್ ಬಲ್ಮಠ ಸಹ ನಿರ್ಮಾಪಕರಾಗಿದ್ದಾರೆ.

ಈ ಚಿತ್ರದಲ್ಲಿ ಇಂಪಾದ ಸಂಗೀತದೊಂದಿಗೆ 6 ಹಾಡುಗಳಿದ್ದು, ಸಾಹಿತ್ಯವನ್ನು ಗಣಿ ದೇವ್ ಕಾರ್ಕಳ ಹಾಗೂ ದೀಪಕ್ ಶೆಟ್ಟಿ ಬರೆದಿದ್ದಾರೆ.

ಸಂಗೀತದ ಜೊತೆಗೆ ಚಿತ್ರ ಕಥೆ ಹಾಗೂ ನಿರ್ದೇಶನವನ್ನು ಸ್ವತಃ ಗಣಿ ದೇವ್ ಕಾರ್ಕಳ ಅವರೇ ನಿರ್ವಹಿಸಿದ್ದಾರೆ.

ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ಛಾಯಾಗ್ರಹಕರಾಗಿ ಸುರೇಂದ್ರ ಪಣಿಯೂರು ಕಾರ್ಯನಿರ್ವಹಿಸಿದ್ದಾರೆ.

ಹೀಗೆ ಎಲ್ಲಾ ಹೊಸ ಪ್ರತಿಭೆಗಳ ನಟನಾ ವಿಭಾಗ ಹಾಗೂ ತಂತ್ರಜ್ಞರನ್ನು ಹೊಂದಿರುವ ಈ ಚಿತ್ರ ತನ್ನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಈ ವಿಭಿನ್ನ ಚಿತ್ರದ ತಾರಾಗಣದಲ್ಲಿ ಪವನ್ ಆರ್ಯ,ಸುಶ್ಮಿತಾ ರೈ, ಅಭಿಲಾಶ್ ಕುಲಾಲ್, ಪ್ರಜನ್ ರೈ, ಅಭಿನೇತ್ರಿ ಜೈನ್, ಸ್ವಾತಿ ಶೆಟ್ಟಿ, ಯತೀಶ್ ಹಾಗೂ ಶರಣ್ ಅಭಿನಯಿಸಿದ್ದು ಸಹಾಯಕ ನಿರ್ದೇಶಕರಾಗಿ ಸುಶಾನ್ ರೈ ಮಾವಿನಕಟ್ಟೆ ಹಾಗೂ ಕಾರ್ಯಕಾರಿ ನಿರ್ದೇಶಕರಾಗಿ ಕವಿತಾ ಕನ್ನಿಕಾ ಪೂಜಾರಿ ಹಾಗೂ ಕಿಶನ್ ರೈ ಮಡಿಕೇರಿ ಕಾರ್ಯ ನಿರ್ವಹಿಸಿದ್ದಾರೆ.

ಹಾಗೆಯೇ ಈ ಚಿತ್ರದ ಬಹುಪಾಲು ಚಿತ್ರೀಕರಣವು ಕರಾವಳಿಯ ಸುಂದರ ಭಾಗಗಳು ಹಾಗೂ ಬೆಂಗಳೂರಿನಲ್ಲಿ ನಡೆದಿದೆ.

ಚಿತ್ರದ ಗುಣಮಟ್ಟದಲ್ಲಿ ರಾಜಿಯಾಗದ ಚಿತ್ರತಂಡ ಉನ್ನತ ಮಟ್ಟದ ತಂತ್ರಜ್ಞಾನ ಬಳಸಿಕೊಂಡಿದೆ ಹಾಗೂ ಗ್ರೀನ್ ಸ್ಕ್ರೀನ್ ವಿಎಫ್ಎಕ್ಸ್ ಕೂಡ ಬಳಸಿ ಉತ್ತಮ ದರ್ಜೆಯ ಕನ್ನಡ ಚಲನಚಿತ್ರವನ್ನು ಪ್ರೇಕ್ಷಕ ಮಹಾಪ್ರಭುವಿನ ಮುಂದಿಡಲು ಪ್ರಾಮಾಣಿಕ ಪ್ರಯತ್ನ ಮಾಡಿದೆ.

ಅದೇ ರೀತಿ ವಿಭಿನ್ನತೆಯಲ್ಲೇ ಆರಂಭವಾಗುವ ಈ ಚಿತ್ರ ಅನೇಕ ತಿರುವುಗಳಿಂದ ಕೂಡಿದ್ದು ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಇಂದಿನ ಸಮಾಜದ ವಾಸ್ತವತೆಯನ್ನು ತೋರಿಸಲಿದೆ. ಈರೀತಿಯ ಕಥೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇದುವರೆಗೆ ಬಂದಿಲ್ಲ, ಇದು ಚಿತ್ರರಸಿಕರ ಮನಗೆಲ್ಲಲಿದೆ ಎಂದು ಚಿತ್ರದ ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *