DAKSHINA KANNADA
ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಡೆಮಡೆಸ್ನಾನ
ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಡೆಮಡೆಸ್ನಾನ
ಸುಳ್ಯ ಫೆಬ್ರವರಿ 28: ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಷೇಧಕ್ಕೊಳಾಗಿದ್ದ ಮಡೆ ಮಡೆ ಸ್ನಾನ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಭಕ್ತರೊಬ್ಬರು ಮಡೆಮಡೆ ಸ್ನಾನವನ್ನು ಮತ್ತೆ ಆರಂಭಿಸಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಬಂಟ್ವಾಳ ಮಾಣಿ ನಿವಾಸಿ ಪಾರ್ಪಕಜೆ ವೆಂಕಟರಮಣ ಭಟ್ ಸುಪ್ರೀಂಕೋರ್ಟ್ ನಲ್ಲಿ ಈ ಕುರಿತಾದ ದಾವೆ ಸಲ್ಲಿಸಿದ್ದಾರೆ. ಮಡೆಮಡಸ್ನಾನ ಸೇವೆ ನಿರಾಕರಣೆ ಮೂಲಕ ತನ್ನ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖ ಮಾಡಿದ್ದಾರೆ. ವೆಂಕಟರಮಣ ಭಟ್ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯದಿಂದ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಈ ವರ್ಷ ನಡೆದ ಚಂಪಾ ಷಷ್ಠಿಯ ಸಂದರ್ಭದಲ್ಲಿ ವೆಂಕಟರಮಣ ಭಟ್ ಅವರು ದೇವಾಲಯದ ಆಡಳಿತ ಮಂಡಳಿಯ ಹತ್ತಿರ ಮಡೆ ಮಡೆ ಸ್ನಾನಕ್ಕೆ ಅವಕಾಶ ಕೇಳಿದ್ದರು, ಆದರೆ ಆಡಳಿತ ಮಂಡಳಿ ಸುಪ್ರೀಂಕೋರ್ಟ್ ನ ಆದೇಶದ ಹಿನ್ನಲೆಯಲ್ಲಿ ಮಡೆ ಮಡೆ ಸ್ನಾನ ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಹಿನ್ನಲೆಯಲ್ಲಿ ನನ್ನ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ ಎಂದು ವೆಂಕಟರಮಣ ಭಟ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
You must be logged in to post a comment Login