DAKSHINA KANNADA
ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಶಾಸಕ ಅಶೋಕ್ ರೈ ಹೊಸ ರೂಲ್ಸ್..?
ಪುತ್ತೂರು ಜನವರಿ 07: ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಕಾಂಗ್ರೇಸ್ ಪಕ್ಷದ ಮುಖಂಡರ ಶಿಫಾರಸ್ಸು ಪತ್ರ ಕೇಳಿದ ಪುತ್ತೂರು ಶಾಸಕ ಅಶೋಕ್ ರೈ ಅವರ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುತ್ತೂರು ಶಾಸಕ ಅಶೋಕ್ ರೈ ಕಛೇರಿಯಲ್ಲಿ ನಡೆದ ಅಕ್ರಮ-ಸಕ್ರಮದ ಸಿಟ್ಟಿಂಗ್ ವೇಳೆ ಆಗಮಿಸಿದ ವ್ಯಕ್ತಿಯೊಬ್ಬರ ಹತ್ತಿರ ಎಷ್ಟು ವರ್ಷ ಆಗಿದೆ , ಅಕ್ರಮ ಸಕ್ರಮ ಮಾಡಲು ಎಷ್ಟು ಹಣ ಕೇಳಿದ್ದಾರೆ ಎಂದು ವಿಚಾರಿಸಿದ್ದಾರೆ. ಈ ವೇಳೆ ಯಾರಾದರೂ ಬರೆದುಕೊಟ್ಟಿದ್ದಾರಾ ಎಂದು ಕೇಳಿದ ಶಾಸಕರು ಪಕ್ಷದವರ ಶಿಫಾರಸು ಇದೆಯಾ ಎಂದು ಅರ್ಜಿಯಲ್ಲಿ ಹುಡುಕಾಡಿದ್ದಾರೆ. ಬಳಿಕ ವ್ಯಕ್ತಿ ಹತ್ತಿರ ಮತ ಹಾಕಬೇಕು ಎಂದು ಕೇಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಶಾಸಕ ಅಶೋಕ್ ರೈ ಅವರು ಆಡಳಿತ ಪಕ್ಷದ ಮುಖಂಡರು ಸಹಿ ಮಾಡಿದ ಅರ್ಜಿಗಳಿಗೆ ಮನ್ನಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.