Connect with us

    DAKSHINA KANNADA

    ಏಣಿತಡ್ಕದಲ್ಲಿ ಅಕ್ರಮ ಮರಳು ಅಡ್ಡಿಗೆ ದಾಳಿ, ಸಹಾಯಕರು ಅಂದರ್, ಪ್ರಮುಖ ಆರೋಪಿ ಬಾಹರ್ !

    ಏಣಿತಡ್ಕದಲ್ಲಿ ಅಕ್ರಮ ಮರಳು ಅಡ್ಡಿಗೆ ದಾಳಿ, ಸಹಾಯಕರು ಅಂದರ್, ಪ್ರಮುಖ ಆರೋಪಿ ಬಾಹರ್ !

    ಪುತ್ತೂರು, ಫೆಬ್ರವರಿ 28: ಪುತ್ತೂರು ತಾಲೂಕಿನ ಕೊಯಿಲಾ ಗ್ರಾಮದ ಏಣಿತಡ್ಕ, ಸುದೆಂಗಳ,ಪೆರಂಗಾಜೆ ಎನ್ನುವ ಪ್ರದೇಶಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳುದಂಧೆ ನಡೆಯುತ್ತಿದೆ.

    ಮರಳು ಸಾಗಿಸುವ ಟಿಪ್ಪರ್ ಲಾರಿಗಳು ಗೋಳಿತ್ತಡಿ ರಸ್ತೆಯ ಮೂಲಕ ನಿರಂತರವಾಗಿ ಸಾಗುತ್ತಿರುವ ಹಿನ್ನಲೆಯಲ್ಲಿ ಈ ಹಳ್ಳಿರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ.

    ಈ ಬಗ್ಗೆ ಸ್ಥಳೀಯ ಕಡಬ ಪೋಲೀಸ್ ಠಾಣೆಗೆ , ಕಡಬ ತಹಶೀಲ್ದಾರರಿಗೆ ಹಾಗೂ ಸ್ಥಳೀಯ ಪಂಚಾಯತ್ ಗಳಿಗೆ ಅಕ್ರಮ ದಂಧೆಕೋರರಿಂದ ತಿಂಗಳು ತಿಂಗಳು ಸರಿಯಾಗಿ ಕಪ್ಪಕಾಣಿಕೆ ಸಲ್ಲಿಕೆಯಾಗುತ್ತಿರುವುದರಿಂದ ಸಾರ್ವಜನಿಕರು ಈ ಬಗ್ಗೆ ಯಾರಿಗೆ ದೂರು ನೀಡಿದರೂ ಕೊನೆಗೆ ಅದು ಮರಳು ದಂಧೆಕೋರರಿಗೇ ತಲುಪುತ್ತಿದೆ.

    ದೂರು ನೀಡಿದವರನ್ನು ಬೆದರಿಸುವ, ಮರಳು ಲಾರಿಗಳನ್ನು ಅಡ್ಡಾದಿಡ್ಡಿ ಚಲಾಯಿಸಿ ದೂರುದಾರನನ್ನು ವಿಚಲಿತಗೊಳಿಸುವಂತಹ ಪ್ರಯತ್ನಗಳು ಇಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ.

    ಏಣಿತಡ್ಕದಲ್ಲಿರುವ ಮರಳು ಅಡ್ಡೆಯ ರೂವಾರಿ ಕಾಂಗ್ರೇಸ್ ನ ಪುಡಿ ಮುಖಂಡ ಯತೀಶ್ ಬಾನಡ್ಕ ಎಂಬವನಾದರೆ, ಪೆರಂಗಾಜೆಯಲ್ಲಿ ಚಂದ್ರಹಾಸ್ ಗೌಡ ಹಾಗೂ ಸುದೆಂಗಳದಲ್ಲಿ ಗಫೂರ್ ಎನ್ನುವ ಖತರ್ ನಾಕ್ ಗಳಾಗಿದ್ದಾರೆ.

    ಈ ನಡುವೆ ಏಣಿತಡ್ಕದ ಮರಳು ಕಿಂಗ್ ಯತೀಶ್ ಬಾನಡ್ಕ ಈ ಪರಿಸರದಲ್ಲಿರುವ ಕಾಡುಗಳಿಂದ ನಿರಂತರವಾಗಿ ಮರಗಳನ್ನು ಅಕ್ರಮವಾಗಿ ಕಡಿದು ತನ್ನ ಮರದ ಮಿಲ್ ನಲ್ಲೇ ಸೈಜು ಮಾಡಿ ಮಾರಾಟ ಮಾಡುತ್ತಿದ್ದ.

    ಈ ಕುರಿತು ಮಾಹಿತಿ ಪಡೆದ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಆತನ ಮಿಲ್ ಗೆ ರೈಡ್ ಮಾಡಿ ಆತನ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮರ ಹಾಗೂ ಮರವನ್ನು ಸೈಜ್ ಮಾಡುವ ಯಂತ್ರವನ್ನೂ ಸೀಝ್ ಮಾಡಿದ್ದರು.

    ಆದರೆ ಮೊದಲೇ ಕಾಂಗ್ರೇಸ್ ಮುಖಂಡ, ಅರಣ್ಯದ ಉಸ್ತುವಾರಿ ವಹಿಸಿಕೊಂಡಿರುವ ರೈ ಗಳ ನಿಕಟವರ್ತಿ ಕೂಡಾ. ಮೇಲಿಂದ ಬಂದ ಒಂದೇ ಕಾಲ್ ನಲ್ಲಿ ತೋರಿಕೆಯ ಫೈನ್ ಕಟ್ಟುವ ಮೂಲಕ ಅಕ್ರಮವನ್ನು ಸಲೀಸಾಗಿ ಸಕ್ರಮ ಮಾಡಿಕೊಂಡಿದ್ದ.

    ಆದರೆ ಇದೀಗ ಮತ್ತೆ ಈತನ ಮರಳು ಸೈಟಿಗೂ ದಾಳಿಯಾಗಿದೆ.ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ರವಿಕಾಂತೇ ಗೌಡರ ನೇರ ಸೂಚನೆಯ ಮೇರೆಗೆ ದಾಳಿ ನಡೆಸಿದ ವಿಶೇಷ ತಂಡ ಮರಳುಗಾರಿಕೆಗೆ ಬಳಸುತ್ತಿದ್ದ ಕೋರುವ, ತುಂಬಿಸುವ, ಕೊಂಡೊಯ್ಯುವ ವಸ್ತುಗಳನ್ನು ಸೀಸ್ ಮಾಡಿ ಮೂವರನ್ನು ವಶಕ್ಕೂ ಪಡೆದಿದ್ದಾರೆ.

    ದಾಳಿ ಸಂದರ್ಭದಲ್ಲಿ ಯತೀಶ್ ಬಾನಡ್ಕ ತಪ್ಪಿಸಿಕೊಂಡ ಹಿನ್ನಲೆಯಲ್ಲಿ ಈತ ಇದೀಗ ತನ್ನ ಪ್ರಭಾವ ಬಳಸಿಕೊಂಡು ಬಂಧನದಿಂದ ಮುಕ್ತನಾಗಿದ್ದಾನೆ.

    ಸ್ಥಳೀಯ ಕಡಬ ಪೋಲೀಸರಲ್ಲಿ ಈತನ ಬಂಧನದ ಬಗ್ಗೆ ವಿಚಾರಿಸಿದರೆ ಆತ ತಲೆ ಮರೆಸಿಕೊಂಡಿದ್ದಾನೆ ಎನ್ನುವ ಸಿದ್ಧ ಉತ್ತರ ಸಿಗುತ್ತಿದೆ.

    ಆದರೆ ವಾಸ್ತವವಾಗಿ ಈತ ಕೊಯಿಲಾ ಪರಿಸರದಲ್ಲೇ ತಿರುಗಾಡಿಕೊಂಡಿದ್ದು, ಈತನ ತಿಂಗಳು ತಿಂಗಳು ಸಲ್ಲಿಸುತ್ತಿದ್ದ ಕಪ್ಪದ ಖುಣವನ್ನು ಎಲ್ಲರೂ ಈ ರೀತಿ ತೀರಿಸುತ್ತಿದ್ದಾರೆ ಎನ್ನುವ ಮಾತುಗಳು ಸ್ಥಳೀಯ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

    ಅಧಿಕಾರದಲ್ಲಿರುವ ಪಕ್ಷದಲ್ಲಿ ಗುರುತಿಸಿಕೊಂಡರೆ, ನಾಲ್ಕು ಪಕ್ಷದ ಮುಖಂಡರ ಜೊತೆಗೆ ಫೋಸ್ ಕೊಟ್ಟು ಫೋಟೋ ತೆಗೆಸಿಕೊಂಡರೆ ತಾನು ಏನೂ ಮಾಡಬಹುದು ಎಂದುಕೊಳ್ಳುವ ಇಂಥ ಲಂಫಂಗರಿಗೆ ಕಾನೂನಿನ ಬಿಸಿ ತೋರಿಸಬೇಕಿದೆ.

    ಅಲ್ಲದೆ ಇಂಥ ವ್ಯಕ್ತಿಗಳಿಗೆ ಬೆಂಬಲ ನೀಡುವ ಮುಖಂಡರನ್ನೂ ಈ ಲಂಫಂಗರ ಜೊತೆ ಶಿಕ್ಷೆ ನೀಡಬೇಕಿದೆ ಎನ್ನುವ ಒತ್ತಾಯವೂ ಸ್ಥಳೀಯರದ್ದಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply