MANGALORE
ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ
ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ
ಮಂಗಳೂರು ಅಕ್ಟೋಬರ್ 23: ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಇತ್ತಿಚೆಗೆ ನಡೆದ ಕರ್ನಾಟಕ ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಒಟ್ಟು 17 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಪಡೆದು ಒಟ್ಟು 29 ಪದಕಗಳನ್ನು ಗೆದ್ದು 4 ನೂತನ ಕೂಟ ದಾಖಲೆಗಳನ್ನು ನಿರ್ಮಿಸಿ ಸಾಧನೆ ಮೆರೆದಿದ್ದಾರೆ.
17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್- ಚಕ್ರ ಎಸೆತ, ರಿನ್ಸ್ ಜೋಸೆಫ್ – 400ಮೀ, ಗೋಪಾಲಕೃಷ್ಣ- ಪೋಲ್‍ವಾಲ್ಟ್, ಅಜಿತ್ ಎ.- ಎತ್ತರ ಜಿಗಿತದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.
ಈ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್ ಪಡೆದುಕೊಂಡರು. ಆಳ್ವಾಸ್ ಪ್ರೌಢಶಾಲೆಯಿಂದ 16 ಜನ ಕ್ರೀಡಾಪಟುಗಳು ಮುಂದಿನ ನವೆಂಬರ್ ನಲ್ಲಿ ಭೋಪಾಲ್‍ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕೂಲ್ ಗೇಮ್ಸ್ ಅತ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿದ್ದಾರೆ.