Connect with us

    MANGALORE

    ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ

    ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ

    ಮಂಗಳೂರು ಅಕ್ಟೋಬರ್ 23: ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಇತ್ತಿಚೆಗೆ ನಡೆದ ಕರ್ನಾಟಕ ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಒಟ್ಟು 17 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಪಡೆದು ಒಟ್ಟು 29 ಪದಕಗಳನ್ನು ಗೆದ್ದು 4 ನೂತನ ಕೂಟ ದಾಖಲೆಗಳನ್ನು ನಿರ್ಮಿಸಿ ಸಾಧನೆ ಮೆರೆದಿದ್ದಾರೆ.

    17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್- ಚಕ್ರ ಎಸೆತ, ರಿನ್ಸ್ ಜೋಸೆಫ್ – 400ಮೀ, ಗೋಪಾಲಕೃಷ್ಣ- ಪೋಲ್‍ವಾಲ್ಟ್, ಅಜಿತ್ ಎ.- ಎತ್ತರ ಜಿಗಿತದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.
    ಈ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್ ಪಡೆದುಕೊಂಡರು. ಆಳ್ವಾಸ್ ಪ್ರೌಢಶಾಲೆಯಿಂದ 16 ಜನ ಕ್ರೀಡಾಪಟುಗಳು ಮುಂದಿನ ನವೆಂಬರ್ ನಲ್ಲಿ ಭೋಪಾಲ್‍ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕೂಲ್ ಗೇಮ್ಸ್ ಅತ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply