ಗಾಂಜಾ ವ್ಯಸನಿಗೆ ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು
ಮಂಗಳೂರು ಅಕ್ಟೋಬರ್ 24: ಗಾಂಜಾ ಸೇವಿಸಿ ದಾಂಧಲೆ ನಡೆಸುತ್ತಿದ್ದ ಯುವಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಯುವಕನನ್ನು ಉಳ್ಳಾಲ ಕೋಡಿಯ ಮುತ್ತಲೀಬ್ ಎಂದು ಗುರುತಿಸಲಾಗಿದೆ. ಈತ ಉಳ್ಳಾಲದ ಕೋಡಿಯಲ್ಲಿ ದಿನಾ ಗಾಂಜಾ ಸೇವಿಸಿ ದಾಂಧಲೆ ಮಾಡುತ್ತಿದ್ದ,
ಈತನ ಮೇಲೆ ಹಲವಾರು ಕ್ರಿಮಿನಲ್ ಕೇಸ್ ಗಳಿದ್ದು ಅಲ್ಲದೆ ಈತ ರಾಜು ಕೋಟ್ಯಾನ್ ಹತ್ಯೆಯ ಆರೋಪಿಯಾಗಿದ್ದಾನೆ. ಈತನ ಕಾಟಕ್ಕೆ ಬೇಸತ್ತ ಸ್ಥಳೀಯರು ಇಂದು ಈತ ತನ್ನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಇವನ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಹಲ್ಲೆ ತಡೆಯಲು ಹೋದ ಪೊಲೀಸ್ ಸಿಬ್ಬಂದಿ ಬಸವರಾಜ್ ಮೇಲೂ ಹಲ್ಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಕಾನ್ಸ್ ಸ್ಟೇಬಲ್ ಬಸವರಾಜ್ ಹಾಗೂ ಮುತಾಲಿಬ್ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.