FILM
ರಶ್ಮಿಕಾ ಮಂದಣ್ಣ ಡೀಫ್ ಫೇಕ್ ವಿಡಿಯೋದ ಬಗ್ಗೆ ಪ್ರತಿಕ್ರಿಯಿಸಿದ ಅಸಲಿ ಯುವತಿ…ಡೀಪ್‌ಫೇಕ್ ಮಾಡಿರುವುದರಲ್ಲಿ ನನ್ನ ಪಾತ್ರವಿಲ್ಲ
ಬೆಂಗಳೂರು ನವೆಂಬರ್ 07: ನಟಿ ರಶ್ಮಿಕಾ ಮಂದಣ್ಣ ಅವರ ಡೀಫ್ ಪೇಕ್ ವಿಡಿಯೋದಲ್ಲಿರುವ ನಿಜವಾದ ಯುವತಿ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ, ನಟ ರಶ್ಮಿಕಾ ಮಂದಣ್ಣ ಅವರ ಡಿಫ್ ಪೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ವೈರಲ್ ಆಗಿರುವ ವಿಡಿಯೋ ಇಂಗ್ಲೆಂಡ್ ನಲ್ಲಿ ನೆಲೆಸಿರುವ ಝಾರಾ ಪಟೇಲ್ ಎಂಬ ಯುವತಿಯದ್ದಾಗಿದ್ದು, ಝಾರಾ ಪಟೇಲ್ ಲಿಫ್ಟ್ ಪ್ರವೇಶ ಮಾಡುತ್ತಿರುವ ವಿಡಿಯೊ ಇಟ್ಟುಕೊಂಡು ಯಾರೊ ಕಿಡಿಗೇಡಿಗಳು, ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ವಿಡಿಯೊ ಮಾಡಿ ಹರಿಬಿಟ್ಟಿದ್ದರು.
ನಂತರ ಫ್ಯಾಕ್ಟ್ ಚೆಕ್ ಮಾಡಿದ್ದಾಗ ವಿಡಿಯೋ ಹೊರದೇಶದಲ್ಲಿರುವ ಭಾರತೀಯ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಝಾರಾ ಪಟೇಲ್ ಎನ್ನುವ ಯುವತಿಗೆ ಸಂಬಂಧಿಸಿದ್ದು ಎಂದು ಬಹಿರಂಗವಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಬಗ್ಗೆ ಆಘಾತ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿರುವ ಝಾರಾ ಪಟೇಲ್ ಅವರು, ‘ವಿಡಿಯೊ ನೋಡಿ ನನ್ನ ಮನಸ್ಸು ತೀವ್ರ ಆಘಾತಗೊಂಡಿದೆ’ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಭವಿಷ್ಯದ ಬಗೆಗಿನ ಚಿಂತೆಯನ್ನು ಈ ವಿಡಿಯೊ ಹುಟ್ಟುಹಾಕಿದೆ. ಭವಿಷ್ಯ ನೋಡಿದರೆ ತುಂಬಾ ಭಯವಾಗುತ್ತಿದೆ’ ಎಂದಿದ್ದಾರೆ. ‘ನನ್ನ ವಿಡಿಯೊಕ್ಕೆ ಭಾರತದ ಜನಪ್ರಿಯ ನಟಿಯೊಬ್ಬರ ಮುಖವನ್ನು ಡೀಪ್‌ಫೇಕ್ ಮಾಡಿ ವಿಡಿಯೊ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಡೀಪ್‌ಫೇಕ್ ಮಾಡಿರುವುದರಲ್ಲಿ ನನ್ನ ಪಾತ್ರವಿಲ್ಲ. ಇಂಟರ್‌ನೆಟ್‌ನಲ್ಲಿರುವುದೆಲ್ಲ ನಿಜವಲ್ಲ. ಅನುಮಾನ ಬರುವ ವಿಷಯಗಳನ್ನು ದಯವಿಟ್ಟು ಫ್ಯಾಕ್ಟ್ ಚೆಕ್‌ಗೆ ಒಳಪಡಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಝಾರಾ ಪಟೇಲ್ ಅವರು ಲಂಡನ್‌ನಲ್ಲಿ ಇರುವ ಒಬ್ಬ ಬ್ರಿಟಿಷ್ ಇಂಡಿಯನ್ ಇನ್‌ಫ್ಲುಯೆನ್ಸರ್ ಆಗಿದ್ದು ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 4.5 ಲಕ್ಷಕ್ಕೂ ಅಧಿಕ ಫಾಲೋವರ್‌ಗಳು ಇದ್ದಾರೆ.
You must be logged in to post a comment Login