Connect with us

  FILM

  ಕನ್ನಡದ ಸ್ಟಾರ್ ನಟರಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ ಯುಟ್ಯೂಬರ್ ಡಾ. ಬ್ರೋ

  ಬೆಂಗಳೂರು ನವೆಂಬರ್ 18: ಕನ್ನಡದ ಸೂಪರ್ ಸ್ಟಾರ್ ನಟರಿಗಿಂತ ಕನ್ನಡದ ಯೂಟ್ಯೂಬರ್ ಇನ್ಸ್ಟಾ ಗ್ರಾಂ ನಲ್ಲಿ ಅತಿಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಕನ್ನಡದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರಿಗಿಂತ ಹೆಚ್ಚು ಪಾಲೋವರ್ಸ್ ಗಳನ್ನು ಹೊಂದಿದ್ದಾರೆ.


  ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್. ಇವರು ಕರ್ನಾಟಕದ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್. ದರ್ಶನ್ ಅವರಿಗೆ ಇನ್’ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನು ಸುದೀಪ್ ಅವರನ್ನು 2.1 ಮಿಲಿಯನ್ ಜನ ಫಾಲೋ ಮಾಡುತ್ತಿದ್ದಾರೆ. ಆದರೆ ಈ ಯೂಟ್ಯೂಬರದ ಈ ಇಬ್ಬರಿಗಿಂತ ಹೆಚ್ಚು ಅಂದರೆ 2.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಎಲ್ಲರ ಮನಗೆದ್ದಿದ್ದಾನೆ.


  ನಮಸ್ಕಾರ ದೇವ್ರು ಅಂತಾನೆ ಮಾತು ಶುರು ಮಾಡುವ ಡಾ. ಬ್ರೋ ಕನ್ನಡಿಗರ ಮೆಚ್ಚಿನ ಯೂಟ್ಯೂಬರ್. ಪಾಕಿಸ್ತಾನ, ಚೀನಾ, ಸುಡಾನ್, ಆಫ್ರಿಕಾ ಸೇರಿದಂತೆ ಅನೇಕ ದೇಶಗಳನ್ನು ಸುತ್ತುತ್ತಾ ಕನ್ನಡದಲ್ಲೇ ಮಾಹಿತಿ ನೀಡುತ್ತಾ ವಿಶೇಷ ಪ್ರಯತ್ನದಿಂದ ಮುನ್ನೆಲೆಗೆ ಬಂದವರು ಗಗನ್. ಇವರಿಗೆ ಸದ್ಯ ಇನ್’ಸ್ಟಾಗ್ರಾಂನಲ್ಲಿ 2.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಂದಹಾಗೆ ಕನ್ನಡಿಗರಿಗೆ ಅಂಗೈನಲ್ಲೇ ಇಡೀ ಪ್ರಪಂಚ ತೋರಿಸಲು ಮುಂದಾಗಿರುವ ಗಗನ್, ಇದೀಗ ಅಯೋಧ್ಯೆಯಲ್ಲಿ ವಿಶೇಷ ವ್ಲಾಗ್ ಮಾಡುತ್ತಿದ್ದಾರೆ. ರಾಮನ ಮೂಲದ ಬಗ್ಗೆ ಸವಿವರವಾಗಿ ಮಾಹಿತಿ ನೀಡುತ್ತಿರುವ ಗಗನ್ ಶ್ರೀನಿವಾಸ್, ಯೂಟ್ಯೂಬ್’ನಲ್ಲಿ 2.32 ಮಿಲಿಯನ್ ಸಬ್’ಸ್ಕ್ರೈಬರ್ಸ್’ನ್ನು ಹೊಂದಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply