LATEST NEWS
ವೆಬ್ ಸಿರೀಸ್ ನೋಡಿ ಯುಟ್ಯೂಬರ್ ಹಚ್ಚಾಟ..ಚಲಿಸುತ್ತಿದ್ದ ಕಾರಿನಿಂದ ಹಣ ಎಸೆದು ಜೈಲು ಸೇರಿದ

ಗುರುಗ್ರಾಮ ಮಾರ್ಚ್ 15: ಫರ್ಜಿ ವೆಬ್ ಸಿರೀಸ್ ನೋಡಿ ಯುಟ್ಯೂಬರ್ ಒಬ್ಬ ಚಲಿಸುತ್ತಿದ್ದ ಕಾರಿನಿಂದ ಹಣವನ್ನು ಎಸೆದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಸದ್ಯ ಯುಟ್ಯೂಬರ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ಬಂಧಿತ ಆರೋಪಿಗಳು.
ಮಾರ್ಚ್ 2 ರಂದು ಗುರುಗ್ರಾಮ್‌ನ ಡಿಎಲ್‌ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಕಾರಿನ ಡಿಕ್ಕಿಯಲ್ಲಿ ಕುಳಿತ ಮುಖವನ್ನು ಅರ್ಧ ಮುಚ್ಚಿಕೊಂಡಿರುವ ವ್ಯಕ್ತಿಯು ಕರೆನ್ಸಿ ನೋಟುಗಳನ್ನು ರಸ್ತೆಗೆ ಎಸೆದಿದ್ದಾನೆ. ದೆಹಲಿ ನೋಂದಣಿ ಸಂಖ್ಯೆಯ ನೇಮ್ ಫ್ಲೇಟ್ ಹೊಂದಿರುವ ಬಿಳಿ ಬಣ್ಣದ ಕಾರನ್ನು ವಿಡಿಯೋದಲ್ಲಿ ಕಾಣಬಹುದು. ಕಾರಿನಿಂದ ಹಣವನ್ನು ತೆಗೆದು ರಸ್ತೆಗೆ ತೂರುವುದು ವಿಡಿಯೋದಲ್ಲಿದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಅದನ್ನು ಡಿಲೇಟ್ ಮಾಡಲಾಗಿತ್ತು. ಆದರೆ ಪೊಲೀಸರು ಅಪಾಯಕಾರಿ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ದಿಲ್ಲಿ ಮೂಲದ ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ನನ್ನು ಬಂಧಿಸಿದ್ದಾರೆ.
ಆರೋಪಿಗಳು ವೆಬ್ ಸಿರೀಸ್ ವೊಂದರ ದೃಶ್ಯವನ್ನು ರೀ ಕ್ರಿಯೇಟ್ ಮಾಡಲು ಹೋಗಿದ್ದರು. ಇದೊಂದು ನಟನೆ ಮಾತ್ರ, ಅವರು ಅಲ್ಲಿ ಬಳಸಿದ ನೋಟ್ ಗಳು ನಕಲಿ. ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.