Connect with us

  FILM

  ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್!

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮ ಹೊಸ ಮೈಲಿಗಲ್ಲನ್ನೇ ಬರೆದಿದೆ. ಈ ಕಾರ್ಯಕ್ರಮದಲ್ಲಿ ಅದೆಷ್ಟೋ ಸಾಧಕರು ಬಂದು ತಮ್ಮ ಸ್ಪೂರ್ತಿದಾಯಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.

  ಈ ಹಿಂದೆ ಸುಧಾ ಮೂರ್ತಿ, ವೀರೇಂದ್ರ ಹೆಗ್ಗಡೆ, ಸಿದ್ದರಾಮಯ್ಯ, ರಕ್ಷಿತ್ ಶೆಟ್ಟಿ, ಯಶ್, ರಾಧಿಕಾ ಪಂಡಿತ್, ದಿ.ನಟ ಪುನೀತ್ ರಾಜ್ ಕುಮಾರ್ ಸೇರಿ ಅನೇಕ ಕಲಾವಿದರು, ಸಮಾಜದಲ್ಲಿ ತಮ್ಮ ಕಾರ್ಯಗಳಿಂದಲೇ ಹೆಸರು ಮಾಡಿದ ಮಹಾನ್ ವ್ಯಕ್ತಿಗಳು ಆಗಮಿಸಿದ್ದಾರೆ.

  ಇದೀಗ ಈ ಶೋನ 5ನೇ ಆವೃತ್ತಿ ಮಾರ್ಚ್‌ 25ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಭಾರೀ ಕೇಳಿಬರುತ್ತಿದೆ.

  ಇವೆಲ್ಲದರ ಜೊತೆ ಮೊದಲ ಬಾರಿಗೆ ಕ್ರಿಕೆಟಿಗರೊಬ್ಬರು ಈ ಶೋನ ಭಾಗವಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ನಟ, ನಿರ್ದೇಶಕ ರಮೇಶ್‌ ಅರವಿಂದ್‌ ನಡೆಸಿಕೊಡುವ ‘ಜೀ ಕನ್ನಡ’ ವಾಹಿನಿಗಾಗಿ ಅದ್ಭುತ ಈ ರಿಯಾಲಿಟಿ ಶೋನಲ್ಲಿ ಕನ್ನಡಿಗ ಕ್ರಿಕೆಟರ್ ಕೆ ಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಕೆ ಎಲ್ ರಾಹುಲ್ ಬಗ್ಗೆ ಕೊಂಚ ಪರಿಚಯ ಹೇಳಬೇಕೆಂದರೆ ಇವರ ಪೂರ್ಣ ಹೆಸರು ಕಣ್ಣನೂರು ಲೋಕೇಶ್ ರಾಹುಲ್. 1992ರ ಏಪ್ರಿಲ್ 18ರಂದು ಇವರು ಜನಿಸಿದ್ದು, ಟೀಂ ಇಂಡಿಯಾದ ಬಲಿಷ್ಟ ಆಟಗಾರರಲ್ಲಿ ಓರ್ವ, ಬಲಗೈ ಬ್ಯಾಟರ್ ಮತ್ತು ಸಾಂದರ್ಭಿಕ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಸಖತ್ ಹೆಸರು ಮಾಡಿದ್ದಾರೆ.

  2014 ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ಅವರು, ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದರು. ಇದರ ಜೊತೆಗೆ ಪುರುಷರ ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿಯೇ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇನ್ನೊಂದೆಡೆ ಅಂತಾರಾಷ್ಟ್ರೀಯ ಕ್ರಿಕೆಟ್‌’ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಕೀರ್ತಿ ಕೆ ಎಲ್ ರಾಹುಲ್ ಪಾಲಿಗಿದೆ.

  ಈ ಹಿಂದೆ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ ಸಹ ಅವರು ನಿವೃತ್ತಿಯ ಬಳಿಕ ಆಗಮಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಸಕ್ರಿಯ ಕ್ರಿಕೆಟಿಗ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ಅದ್ಭುತ ಸಾಧಕ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದರೆ, ಅವರ ಜೀವನದ ಅಮೋಘ ಕ್ಷಣಗಳನ್ನು ಕೇಳಿದ ವೀಕ್ಷಕರಿಗೆ ಸ್ಪೂರ್ತಿ ನೀಡುವುದು ಖಂಡಿತ ಎನ್ನಬಹುದು.

  Share Information
  Advertisement
  Click to comment

  You must be logged in to post a comment Login

  Leave a Reply