LATEST NEWS
ಪುತ್ತೂರು : ಬೆಳ್ಳಿಪ್ಪಾಡಿಯಲ್ಲಿ ಯುವಕ ನೇಣಿಗೆ ಶರಣು..!!
ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದಲ್ಲಿ ಶನಿವಾರ ನಡೆದಿದೆ.
ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದಲ್ಲಿ ಶನಿವಾರ ನಡೆದಿದೆ.
ಕೊಡಿಮರ ನಿವಾಸಿ ಬೇಬಿ ಪುಜಾರಿ ಮತ್ತು ಕುಸುಮಾ ದಂಪತಿ ಪುತ್ರ ರಕ್ಷಿತ್ ಕೊಡಿಮರ ಆತ್ಮಹತ್ಯೆ ಮಾಡಿಕೊಂಡವರು. ಕೂಲಿಕಾರ್ಮಿಕರಾಗಿದ್ದ ಅವರು ಮನೆಯ ಸಮೀಪ ನೇಣು ಬಿಗಿದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ರಕ್ಷಿತ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.