DAKSHINA KANNADA
ಪೊಲೀಸ್ ರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಸಾವನಪ್ಪಿದ ಯುವಕ

ಕಾಸರಗೋಡು ಮೇ 07: ಜೂಜಾಟ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ದಾಳಿ ನಡೆಸಿದ ಸಂದರ್ಭ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕನೊಬ್ಬ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ಕಾಸರಗೋಡಿನ ಎನ್ನಪ್ಪರದಲ್ಲಿ ನಡೆದಿದೆ.
ಕುಜಿಕ್ಕೋಲ್ ಮೂಲದ ವಿಷ್ಣು (24) ಮೃತ ಯುವಕ.
ಶನಿವಾರ ರಾತ್ರಿ ಎನ್ನಪ್ಪರದಲ್ಲಿ ಫುಟ್ ಬಾಲ್ ಆಡುತ್ತಿರುವಾಗ ಜೊತೆಗೆ ಜೂಜಾಟವನ್ನು ಆಡಿದ್ದಾರೆ. ಇದರಲ್ಲಿ ವಿಷ್ಣು ಅವರು ಕೂಡ ಭಾಗಿಯಾಗಿದ್ದಾರೆ. ಇದೇ ವೇಳೆ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಪೊಲೀಸರ ಏಕಾಏಕಿ ದಾಳಿಗೆ ಭೀತಿಯಿಂದ ಎಲ್ಲರೂ ಓಡಿದ್ದಾರೆ. ಪೊಲೀಸರನ್ನು ನೋಡಿ ಓಡುವಾಗ ಕತ್ತಲಿನಲ್ಲಿ ವಿಷ್ಣು ಬಾವಿಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
