ಮಂಗಳೂರು ಅಗಸ್ಟ್ 2: ಸಚಿವ ಡಿ ಕೆ ಶಿವಕುಮಾರ್ ಮನೆ , ಕಚೇರಿಗಳ ಮೇಲೆ ಕೇಂದ್ರ ಆದಾಯ ಅಧಿಕಾರಗಳು ದಾಳಿ ನಡೆಸಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಆದಾಯ ಕಚೇರಿಗೆ ದಾಳಿ ಮಾಡಿದ್ದಾರೆ. ನಗರದ ಅತ್ತಾವರ ಕಚೇರಿ ಒಳಗೆ ನುಗ್ಗಿ ದಾಂಧಲೆ ನಡೆಸಿದ 60 ಕ್ಕೂ ಹೆಚ್ಚು ಕಾರ್ಯಕರ್ತರು ಪ್ರಧಾನ ಕಚೇರಿಯ ಗಾಜುಗಳನ್ನು  ಕಾಲಿನಿಂದ ಒದ್ದು ಗಾಜುಗಳನ್ನು ಪುಡಿಗಟ್ಟಿದ್ದಾರೆ ಅಲ್ಲದೆ ಐಟಿ ಕಚೇರಿ ಎದುರಲ್ಲಿ ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಪೊಲೀಸರು ಇದ್ದರೂ ಅದನ್ನು ಲೆಕ್ಕಿಸದೆ ದಾಂಧಲೆ ನಡೆಸಿ, ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಕೊನೆಗೆ ಹೆಚ್ಚುವರಿ ಪೊಲೀಸರು ಆಗಮಿಸುವಷ್ಟರಲ್ಲಿ ಪರಾರಿಯಾಗಿದ್ದಾರೆ. ಕಾರ್ಪೊರೇಟರ್ ವಿನಯರಾಜ್ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನೆಪದಲ್ಲಿ ಕಚೇರಿ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದು ಸಾರ್ವನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಧಾವಿಸಿದ್ದು, ಐಟಿ ಕಚೇರಿಗೆ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದ್ದು, ಧಾಂದಲೆ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಡಿಯೋಗಾಗಿ ಕೆಳಕಿನ ಲಿಂಕನ್ನು ಒತ್ತಿರಿ…

2 Shares

Facebook Comments

comments