ಬೆಳ್ತಂಗಡಿ, ಜುಲೈ 02 : ಹೆದ್ದಾರಿ ಪಕ್ಕದ ಬಾರ್ ಗಳ ಕಾರುಬಾರಿಗೆ ಸುಪ್ರೀಂ ಕೋರ್ಟ್ ಅಂಕುಶ ಹಾಕಿದ್ದರೂ ,ದಕ್ಷಿಣ ಕನ್ನಡ ಜಿಲ್ಲೆಯ ಬಾರ್ ಮಾಲಿಕನೋರ್ವ ಸುಪ್ರೀಂ ಕೋರ್ಟ್ ಗೇ ಶಾಕ್ ನೀಡಿದ್ದಾನೆ. ಬೆಳ್ತಂಗಡಿ ಯ ಸಂತೆಕಟ್ಟೆಯಲ್ಲಿರುವ ಡಿ.ಕೆ ಬಾರ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಇದೆ. ಸರ್ವೊಚ್ಚ ನ್ಯಾಯಾಲಯ ವಿಧಿಸಿರುವ ನಿಯಮನುಸಾರದ ಪ್ರಕಾರ ಬಾರ್ ಮತ್ತು ಮದ್ಯದಂಗಡಿಗಳು ಹೆದ್ದಾರಿಯಿಂದ 500 ಮೀಟರ್ ದೂರ ಇರಬೇಕು. ಆದರೆ ಬೆಳ್ತಂಗಡಿಯ ಡಿ.ಕೆ. ಬಾರ್ 500 ಮೀಟರಿ ಗಿಂತಲೂ ಕಡಿಮೆ ಅಂತರದಲ್ಲದ್ದೂ ಅದನ್ನು ತಪ್ಪಿಸಲು ಬಾರ್ ಮಾಲಕ ಕೆ.ಕುರಿಯನ್ ವಾಮಮಾರ್ಗ ಅನುಸರಿಸಿದ್ದಾನೆ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಬದಿಗೊತ್ತಿ ಪರ್ಯಾಯ ವ್ಯವಸ್ಥೆ ಮಾಡಿದ್ದಾನೆ. ರಸ್ತೆ ಬದಿಯಲ್ಲೆ ಇರುವ ತನ್ನ ಬಾರ್ ಗೆ ಗ್ರಾಹಕರು ನೇರವಾಗಿ ಬರುವ ಮುಖ್ಯ ಮಾರ್ಗವನ್ನು ಸುತ್ತಿ ಬಳಸಿ ಬರುವಂತೆ ಮಾರ್ಪಾಡು ಮಾಡಿದ್ದಾನೆ. ಪಾನ ಪ್ರೀಯರು ಬಾರ್ ಗೆ ನೇರ ಮಾರ್ಗದಲ್ಲಿ ಸುತ್ತು ಬಳಸಿ ಬರುವಂತೆ ತಗಡಿನ ಶೀಟ್ ಮೂಲಕ ಬದಲಿ ದಾರಿ ರಚಿಸುವ ಮೂಲಕ ಸುಪ್ರೀಂ ಕೋರ್ಟಿಗೇ ಸವಾಲು ಹಾಕಿದ್ದಾನೆ ಈ ಭೂಪ , ಬಾರ್ ಮಾಲಕನ ಕತರ್ನಾಕ್ ಐಡಿಯಾ ಗೆ ಕುಡುಕರು ಸುಸ್ತಾಗಿದ್ದಾರೆ. ಬೆಳ್ತಂಗಡಿ ಮತ್ತು ಇತರ ಪೇಟೆಗಳಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿರುವ ಕಾರಣ ಪಾನ ಪ್ರೀಯರು ಸಂತೆಕಟ್ಟೆಯ ಡಿ.ಕೆ ಬಾರನ್ನೇ ಅವಲಂಬಿಸಿದ್ದಾರೆ, ಬೆಳ್ತಂಗಡಿ ಯ ಪೇಟೆಯಲ್ಲಿಯೇ ಬಹಿರಂಗವಾಗಿಯೇ ಈ ಅಕ್ರಮ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ ಕಾರಣ ಬಾರ್ ಮಾಲಕನ ಮಾಮುಲು ( ಹಣ) ಅವರನ್ನು ತಣ್ಣಗಾಗಿಸಿದ್ದಾನೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಕೋರ್ಟಿನ ಆದೇಶವನ್ನೆ ಗಾಳಿಗೆ ತೂರಿ ಬಾರ್ ಮಾಲಿಕ ನಡೆಸುತ್ತಿರುವ ದರ್ಬಾರ್ ಗೆ ಅಂಕುಶ ಹಾಕಬೇಕಿದ ಅಗತ್ಯವಿದ್ದು, ಜಿಲ್ಲಾಧಿಕಾರಿ ಇದಕ್ಕೆ ಮುತುವರ್ಜಿ ವಹಿಸಬೇಕಾಗಿದೆ.

 

 

 

 

2 Shares

Facebook Comments

comments