Connect with us

KARNATAKA

ತಾಳಿ ಕಟ್ಟಲು ವಿರೋಧಿಸಿದ್ದಕ್ಕೆ ಯುವತಿಯ ಬರ್ಬರ ಹತ್ಯೆಮಾಡಿದ ಪಾಗಲ್ ಪ್ರೇಮಿ..!

ತುಮಕೂರು : ತನ್ನ ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಆಕ್ರೋಶಗೊಂಡು ಯುವತಿಗೆ ಚಾಕು ಇರಿದ ಪರಿಣಾಮ ಯುವತಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ತುಮಕೂರಿನಲ್ಲಿ  ನಡೆದಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡಗುಳ್ಳ ಗ್ರಾಮದ ಈರಣ್ಣ ಎಂಬಾತ ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ,ದಿನಂಪ್ರತಿ ನನ್ನನ್ನು ಪ್ರೀತಿಸು ಅಂತಾ ಹಿಂದೆ ಬಿದ್ದಿದ್ದ ಆದ್ರೆ ಯುವತಿಯ ಈರಣ್ಣ ನ ಪ್ರೀತಿಯನ್ನು ನಿರಾಕರಿಸಿದ್ದಳು.

ಹೀಗಾಗಿ ಯುವತಿ ಕಾಲೇಜಿಗೆ ಹೋಗುವಾಗ ಆಕೆಗೆ ತಾಳಿಯನ್ನು ಕಟ್ಟಲು ಪ್ರಯತ್ನ ಮಾಡಿದ್ದ ಆದ್ರೆ ಇದಕ್ಕೆ ನಿರಾಕರಿಸಿದ ಕಾರಣಕ್ಕೆ ಯುವತಿಗೆ ಹರಿತವಾದ ಆಯುಧದಿಂದ ಇರಿದು ಪರಾರಿಯಾಗಿದ್ದ.  ವಿಪರೀತ ರಕ್ತಸಾವ್ರದಿಂದ ಯುವತಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ.

ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿದ್ದು ತಲೆ ಮರೆಸಿಕೊಂಡಿರುವ ಆರೋಪಿಯನ್ನು ಹಿಡಿಯಲು ಬಲೆ ಬಿಸಿದ್ದಾರೆ.

ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.