Connect with us

LATEST NEWS

ಮುಂದುವರೆದ ದೈವಸ್ಥಾನಗಳ ಅಪಚಾರ ಪ್ರಕರಣ – ಮುಚ್ಚಿರಕಲ್ಲು ಗುಳಿಗಕಟ್ಟೆಗೆ ಚಪ್ಪಲಿ ಹಾಕಿ ವಿಕೃತಿ

ಮಂಗಳೂರು ಎಪ್ರಿಲ್ 6: ದೈವಸ್ಥಾನಗಳಲ್ಲಿ ಅಪಚಾರ ಮಾಡುವ ಪ್ರವೃತ್ತಿ ಕರಾವಳಿ ಜಿಲ್ಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದಿದ್ದು, ಇದೀಗ ಕಂಬ್ಲಪದವಿನಲ್ಲಿರುವ ಮುಚ್ಚಿರಕಲ್ಲು ಗುಳಿಗ ಸಾನಿಧ್ಯದ ದೈವದ ಕಟ್ಟೆಯ ಬಳಿ ಚಪ್ಪಲಿ ಹಾಕಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.


ಶನಿವಾರ ಗುಳಿಗಜ್ಜನ ಕಟ್ಟೆಯ ಬಳಿ ಕ್ರಿಕೆಟ್ ಟೂರ್ನಿ ನಡೆದಿದ್ದು, ಭಾನುವಾರ ಸಂಜೆ ಚಪ್ಪಲಿ ಹಾಕಿರುವುದು ಪತ್ತೆಯಾಗಿದೆ. ಮುಚ್ಚಿರ ಕಲ್ಲು ಕ್ಷೇತ್ರದ ಸಮಿತಿಯ ಮುಖಂಡರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು , ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು ಅತೀ ಕಾರಣೀಕ ಕ್ಷೇತ್ರವಾಗಿದ್ದು ಎಲ್ಲ ಧರ್ಮೀಯರು ಭಕ್ತಿಯಿಂದ ನಮಿಸಿಕೊಂಡು ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಅನ್ಯಕೋಮಿನ ಯುವಕನೋರ್ವ ವಿಕೃತಿ ಮೆರೆದಿದ್ದು ಕೆಲ ದಿನಗಳಲ್ಲೇ ಆತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು, ಇದಾದ ಬಳಿಕವೂ ಕೋಮು ಸಾಮರಸ್ಯದ ಪ್ರತೀಕವಾಗಿ ಗುಳಿಗನ ಆರಾಧನೆಯೂ ಮುಂದುವರಿದಿದೆ ಎನ್ನುತ್ತಾರೆ ಸ್ಥಳೀಯರು.