Connect with us

    KARNATAKA

    2 ದಿನದಲ್ಲಿಹಸೆಮಣೆ ಏರಬೇಕಿದ್ದ ಯುವತಿ ಸಂಶಯಾಸ್ಪದ ಸಾವು..!

    ವಿಜಯನಗರ :  2 ದಿನದಲ್ಲಿ ಹಸೆಮನೆ ಏರಬೇಕಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿ ನಡೆದಿದೆ.

    ಐಶ್ವರ್ಯ  ಮೃತಪಟ್ಟ ಯುವತಿ. ಕೇವಲ 2 ದಿನಗಳಲ್ಲಿ ಯುವತಿ ಅಂತರ್ಜಾತಿ ಯುವಕನನ್ನು ವಿವಾಹವಾಗಲು ತಯಾರಾಗಿದ್ದಳು. ಆದರೆ ಯುವತಿ ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

    ಖಾಸಗಿ ಕಂಪನಿ‌ಯಲ್ಲಿ ಕೆಲಸ ಮಾಡುತ್ತಿದ್ದ ಐಶ್ವರ್ಯಳ ಮದುವೆ ಅಶೋಕ ಎನ್ನುವರ ಜೊತೆ ನವೆಂಬರ್ 23ಕ್ಕೆ ಫಿಕ್ಸ್ ಆಗಿತ್ತು. ಬೇರೆ-ಬೇರೆ ಜಾತಿಯವರಾಗಿದ್ದರೂ ಸಹ 10 ವರ್ಷದಿಂದ ಪ್ರೀತಿ ಮಾಡುತ್ತಿದ್ದ ಇವರಿಬ್ಬರು ಇನ್ನೇನು ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಬೇಕಿತ್ತು. ಆದ್ರೆ, ಯುವತಿ ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

    ಯುವತಿ ಕೆಳ ಜಾತಿಯವಳು ಎಂಬ ಕಾರಣಕ್ಕೆ ಕೆಲವು ಷರತ್ತುಗಳ ಮೇಲೆ ಯುವಕನ ಕಡೆಯವರು ಮದುವೆಗೆ ಒಪ್ಪಿದ್ದರು. ಇದೇ ಕಾರಣಕ್ಕೆ ಯುವತಿಯ ಕೊಲೆಗೆ ಪ್ರಚೋದನೆ ನೀಡಲಾಗಿದೆ ಎಂದು ಐಶ್ವರ್ಯ ಪೋಷಕರು ಆರೋಪಿಸಿದ್ದಾರೆ.

    ಐಶ್ವರ್ಯ ಹಾಗೂ ವರ ಅಶೋಕ್ ಕಳೆದ 7-8 ವರ್ಷಗಳಿಂದ ಪ್ರೀತಿಸುತ್ತಿದ್ದರು. ನಮಗೂ ಅವರಿಗೂ ಹೊಂದಾಣಿಕೆ ಆಗಲ್ಲ, ನಾನು ಈ ಮದುವೆ ಬೇಡ ಎಂದು ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ ಮನಸ್ಸಿನವಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಯುವಕನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply