LATEST NEWS
ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಇನ್ನಿಲ್ಲ

ಮಂಗಳೂರು :ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ (79) ಇಂದು ಮುಂಜಾನೆ ಕೃಷ್ಣೈಕ್ಯರಾಗಿದ್ದಾರೆ .
ಧಾರ್ಮಿಕ, ಆಧ್ಯಾತ್ಮಿಕ ಜಗತ್ತಿಗೆ ಮಾರ್ಗದರ್ಶಿಯಾಗಿದ್ದ ಶ್ರೀಗಳು ಕಲಾತಪಸ್ವಿಯೂ ಆಗಿದ್ದರು. ದೇಶದ ಕಾನೂನು ಇತಿಹಾಸದಲ್ಲಿ ಶ್ರೀ ಕೇಶವಾನಂದ ಭಾರತಿ ಅವರು 1973 ರಲ್ಲಿ ಕೇರಳ ಸರ್ಕಾರದ ವಿರುದ್ಧ ಸಲ್ಲಿಸಿದ್ದ ದೂರು ಹಾಗೂ ಭೂ ಒಡೆತನದ ಹಕ್ಕಿಗೆ ಸಂದ ಜಯ ದೇಶದ ಕಾನೂನು ಹಾಗೂ ಸಂಸತ್ತು ಮಂಡನೆಗಳಿಗೆ ಹೊಸ ಭಾಷ್ಯ ಬರೆದಿತ್ತು. ಇಂದಿಗೂ ಆ ದೂರಿನ ಆಲಾಪನೆ, ಪರಾಮರ್ಶೆ, ಕಾನೂನು ಹಾಗೂ ಸಂಸತ್ತಿನ ಮೂಲಕ ತಿದ್ದುಪಡಿ ನಿಯಮಗಳ ಬಗ್ಗೆಗಿನ ಅಧ್ಯಾಯ ಕಾನೂನು ವಿದ್ಯಾರ್ಥಿಗಳಿಗೂ ಪಾಠವಾಗಿದೆ.

ಕೆಲದಿನಗಳ ಹಿಂದೆಯಷ್ಟೇ ತಮ್ಮ ಚಾತುರ್ಮಾಸ ವೃತಾಚರಣೆಯನ್ನು ಶ್ರೀಗಳು ಸಮಾಪ್ತಿಗೊಳಿಸಿದ್ದರು . ಯಕ್ಷಗಾನ, ಸಂಗೀತ ಕಲೆಗಳಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಶ್ರೀಗಳು ಸ್ವತಃ ಭಾಗವತರಾಗಿ ಕಲಾರಾಧಕರಾಗಿದ್ದರು