LATEST NEWS
ಕೆಂಪೇಗೌಡರ ಆದರ್ಶ ಮರೆತ ಕೆಂಪೇಗೌಡ ಪ್ರಶಸ್ತಿ ವಿಜೇತ…
ಕೆಂಪೇಗೌಡರ ಆದರ್ಶ ಮರೆತ ಕೆಂಪೇಗೌಡ ಪ್ರಶಸ್ತಿ ವಿಜೇತ…
ಮಂಗಳೂರು ಸೆಪ್ಟೆಂಬರ್ 7: ಮಹಾನ್ ಕಲಾವಿದನೆಂದು ಅಹಂಕಾರ ತಲೆಯಲ್ಲಿ ಅಡರಿಸಿಕೊಂಡ ಯಕ್ಷಗಾನ ಕಲಾವಿದನೊಬ್ಬ ಮಾಧ್ಯಮಗಳೊಂದಿಗೆ ಕೇವಲ ತುಟಿ ಬಿಚ್ಚಿ ಮಾತಾಡಿದಕ್ಕೇ ಫೀಸ್ ಕೇಳಿದ್ದಾರೆ.
ಯಕ್ಷಗಾನದಲ್ಲಿ ಕೊಂಚ ಮಟ್ಟಿನ ಹೆಸರು ಗಳಿಸಿದ ಉಡುಪಿಯ ಶಶಿಕಾಂತ್ ಶೆಟ್ಟಿಯವರಿಗೆ ಇತ್ತೀಚೆಗೆ ಕೆಂಪೇಗೌಡ ಪ್ರಶಸ್ತಿ ಬಂದಿತ್ತು. ಇದರಿಂದ ಈ ಕಲಾವಿದನನ್ನು ಉಡುಪಿ ಜಿಲ್ಲೆ ಬಿಟ್ಟು, ಉಳಿದ ಜಿಲ್ಲೆಗಳ ಜನರಿಗೆ ಪರಿಚಯಿಸಬೇಕು ಎನ್ನುವ ಸದುದ್ಧೇಶದಿಂದ ಮಂಗಳೂರಿನ ಸ್ಥಳೀಯ ಚಾನಲ್ ಒಂದು ಅವರನ್ನು ಅಭಿನಂದಿಸಿ ವರದಿ ಮಾಡಲು ಬಯಸಿತ್ತು.
ಈ ಹಿನ್ನಲೆಯಲ್ಲಿ ಶಶಿಕಾಂತ್ ಶೆಟ್ಟಿಯವರ ಮೊಬೈಲ್ ನಂಬರ್ ಗೆ ಕರೆ ಮಾಡಿದ ಚಾನಲ್ ವರದಿಗಾರ್ತಿಯಲ್ಲಿ ಉಡಾಫೆಯ ಮಾತನ್ನಾಡುವ ಮೂಲಕ ಕಲಾವಿದನಿಗೆ ಇರಬೇಕಾದ ನಯ-ವಿನಯವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ.
ಸಂದರ್ಶನಕ್ಕೆ ಬರಬೇಕಾದರೆ ನನಗೆ ಫೀಸ್ ಕೊಡಬೇಕು, ನನಗೆ ಮಾಧ್ಯಮಗಳ ಪ್ರಚಾರದ ಅಗತ್ಯವಿಲ್ಲ ಎಂದೆಲ್ಲಾ ಅಹಂಕಾರವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅವರಿಗೆ ಕರೆ ಮಾಡಿ ಅವರ ಕರೆಯನ್ನು ಕಾರ್ಯಕ್ರಮದಲ್ಲಿ ಭಿತ್ತರಿಸಿದರ ಹಣವನ್ನೂ ನೀಡಬೇಕೆಂದು ರಂಪಾಟ ನಡೆಸಿದ್ದಾರೆ.
ಕಲೆ,ಸಂಸ್ಕೃತಿಯ ವಿಚಾರದಲ್ಲಿ ಅತ್ಯಂತ ಹೆಮ್ಮೆ ಹೊಂದಿರುವ ಹಾಗೂ ಇಂಥ ಕಾರ್ಯಕ್ರಮಗಳನ್ನು ದೇಶ-ವಿದೇಶಗಳಿಗೆ ಮುಟ್ಟಿಸುತ್ತಿರುವ ಈ ಸ್ಥಳೀಯ ಚಾನಲ್ ಮಂದಿ ಉಡುಪಿ ಜಿಲ್ಲೆಗೆ ಸೀಮಿತಗೊಂಡಿದ್ದ ಈ ಕಲಾವಿದನನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಒಳ್ಳೆ ಉದ್ಧೇಶಕ್ಕೆ ಹೋಗಿ ಅಹಂಕಾರಿ ಕಲಾವಿದನ ಬಾಯಲ್ಲಿ ಉಡಾಫೆಯ ಮಾತುಗಳನ್ನು ಕೇಳುವಂತಾಗಿದೆ.