Connect with us

    KARNATAKA

    ಉಡುಪಿ ಆನೆಗುಡ್ಡೆ ದೇವಳದಲ್ಲಿ ಚಿನ್ನ ಕದ್ದ ಕಳ್ಳಿಯರು ಹುಬ್ಬಳ್ಳಿಯಲ್ಲಿ ಸೆರೆ..!

    ಉಡುಪಿ : ಕರಾವಳಿಯ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಕುಂದಾಪುರ ಆನೆಗುಡ್ಡೆ ಶ್ರೀವಿನಾಯಕ ದೇವಳದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸರು ಭೇದಿಸಿದ್ದಾರೆ.

    ವ್ಯಾನಿಟಿ ಬ್ಯಾಗಿನಲ್ಲಿದ್ದ ಸುಮಾರು 51.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು  ಖತರ್ನಾಕ್ ಕಳ್ಳಿಯರನ್ನು  ಪೊಲೀಸರು ಹುಬ್ಬಳ್ಳಿಯಿಂದ ಬಂಧಿಸಿದ್ದಾರೆ.  ಬೀಬಿಜಾನ್ ಶೇಖ್ (58) ಮತ್ತು ಪಾರವ್ವ ಸಿರಗಹಳ್ಳಿ (54)  ಬಂಧಿತ ಆರೋಪಿಗಳು.

    ಲೋಕೇಶ್‌ ಮಂಜುನಾಥ ನಾಯ್ಕ ಎಂಬವರು ಸುಮಾರು 53.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಖರೀದಿ ಮಾಡಿ ಪರ್ಸಿನಲ್ಲಿಟ್ಟು, ಪತ್ನಿಯ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ದೇವಸ್ಥಾನದ ಹೊರಗಡೆ ಬಂದಾಗ ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನ ಇಟ್ಟಿದ್ದ ಪರ್ಸ್ ಮಾಯವಾಗಿತ್ತು.

    ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಿದ ಕುಂದಾಪುರ ಪೊಲೀಸರು ದೇವಳದ ಸಿಸಿ ಟಿವಿ ಮತ್ತು ಮೊಬೈಲ್‌ ಟವ‌ರ್ ಲೊಕೇಶನ್ ಆಧರಿಸಿ ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 3,75,000 ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply