Connect with us

KARNATAKA

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಯಹತ್ಯೆ ಮಾಡಿಕೊಂಡ ಗೃಹಿಣಿ

Share Information

ಬೆಂಗಳೂರು ಜುಲೈ 04: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಜುಲೈ 2ರಂದು ಬೆಳಗಿನ ಜಾವ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರಾ ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಎರಡನೇ ವಿವಾಹವಾಗಿದ್ದಳು. ಚೇತನ್​ ಕಂಪೆನಿಯೊಂದರ ಮಾಲೀಕನಾಗಿದ್ದು, ಇತ್ತೀಚೆಗೆ ಚೇತನ್​ಗೆ ಮತ್ತೊರ್ವ ಯುವತಿಯ ಸಂಪರ್ಕ ಬೆಳೆದಿದ್ದು, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ತನ್ನ ತಾಯಿ ಪದ್ಮಮ್ಮ ಬಳಿ ಪವಿತ್ರ ತಿಳಿಸಿದ್ದಳು.
ಎಷ್ಟೇ ಹೇಳಿದರೂ ಗಂಡನ ಬುದ್ಧಿ ಬದಲಾಗದ ಹಿನ್ನೆಲೆಯಲ್ಲಿ ಕಡೆಗೆ ಮನನೊಂದು, ಡೆತ್​ನೋಟ್ ಬರೆದು, ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಿ ಸಾವಿಗೆ ಶರಣಾಗಿದ್ದಾಳೆ. ಮಗಳ ಸ್ಟೇಟಸ್​ನಲ್ಲಿದ್ದ ಡೆತ್​ನೋಟ್ ನೋಡಿ ತಾಯಿ ಪದ್ಮಮ್ಮ ಮನೆಗೆ ಬಂದಾಗ ಮಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.


ಸದ್ಯ ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊರ್ವ ಯುವತಿ ವಿರುದ್ದ ಎಫ್​ಐಆರ್ ದಾಖಲಾಗಿದೆ. ಮೃತಳ ತಾಯಿ ಪದ್ಮಮ್ಮ ಅವರ ದೂರಿನನ್ವಯ ಐಪಿಸಿ ಸೆಕ್ಷನ್​ 306ರ ಅಡಿಯಲ್ಲಿ ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಾಗಿದ್ದು, ಡೆತ್​ನೋಟ್ ಹಾಗೂ ಮೃತಳ ಎರಡು ಪೋನ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ


Share Information
Advertisement
Click to comment

You must be logged in to post a comment Login

Leave a Reply