Connect with us

LATEST NEWS

ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ….!!

ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ……!!

ಪುತ್ತೂರು ಜೂನ್ 8: ನಿಡ್ಪಳ್ಳಿ ಗ್ರಾಮದ ಆನಾಜೆಯ ನವವಿವಾಹಿತೆಯೋರ್ವರು ಕುಂಬಳೆಯ ಪುತ್ತಿಗೆಯ ತನ್ನ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ನಿಡ್ಪಳ್ಳಿ ಆನಾಜೆಯ ವಿಶ್ವನಾಥ ರೈ ಮತ್ತು ರತ್ನಾವತಿ ರೈ ದಂಪತಿಯ ಪುತ್ರಿ ರಂಜಿತಾ ರವರು ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾರೆ.

4 ವರ್ಷಗಳ ಹಿಂದೆ ಇವರನ್ನು ಕುಂಬಳೆ ಸಮೀಪದ ಪುತ್ತಿಗೆ ಪದ್ಮನಾಭ ರೈರವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮೂರು ವರ್ಷದ ಗಂಡು ಮಗುವನ್ನು ಹೊಂದಿದ್ದರು. ಪದ್ಮನಾಭ ರೈರವರು ಮುಂಬಯಿಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಮನೆಗೆ ವಾಪಾಸಾಗಿದ್ದರು. ಅವರ ಸಾಂಸಾರಿಕ ಜೀವನ ಉತ್ತಮವಾಗಿಯೇ ನಡೆಯುತ್ತಿತ್ತು ಎನ್ನಲಾಗಿದೆ.

ಜೂನ್ 6ರಂದು ರಾತ್ರಿ ಮಗುವಿನ ವಿಚಾರದಲ್ಲಿ ಪತಿ ಪತ್ನಿಯರಿಗೆ ಸಣ್ಣಮಟ್ಟಿನ ಜಗಳ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರದಲ್ಲಿ ರಂಜಿತಾರವರು ರೂಂನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದವರು ವಾಪಾಸು ಬಂದಿರಲಿಲ್ಲ. ಜೂ.7ರಂದು ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ರಂಜಿತಾರವರು ರೂಂ ನ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ.

Facebook Comments

comments