Connect with us

    LATEST NEWS

    ಮಲ್ಪೆ – 1 ವರ್ಷದ ಮಗುವಿನೊಂದಿಗೆ ಮಹಿಳೆ ನಾಪತ್ತೆ

    ಉಡುಪಿ ನವೆಂಬರ್ 14: ವಿವಾಹಿತ ಮಹಿಳೆಯೊಬ್ಬರು ತಮ್ಮ 1 ವರ್ಷದ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಮಲ್ಪೆಯಲ್ಲಿ ನಡೆದಿದೆ. ಪಡುತೋನ್ಸೆ ಹೂಡೆ ನಿವಾಸಿ ಉಸ್ತಾದ್ ಜುಬೈರ್ (39) ಅವರ ಪತ್ನಿ ಅನ್ಸಿಯಾ (32) ಮತ್ತು ಅವರ ಒಂದು ವರ್ಷದ ಮಗಳು ಅಜೀನ್ ನಾಪತ್ತೆಯಾದವರು.


    ಆನ್ಸಿಯಾ ನವೆಂಬರ್ 7ರಂದು ತನ್ನ ಮಗುವಿನೊಂದಿಗೆ ಬೆಳಗ್ಗೆ 10 ಗಂಟೆಗೆ ತಾನು ಕೆಲಸ ಮಾಡುತ್ತಿರುವ ಹೈರಿಚ್ ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದು ಸಂಜೆ 5 ಗಂಟೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply