Connect with us

    FILM

    ‘ಟೋಬಿ’ ಸಿನಿಮಾ ಚೆನ್ನಾಗಿಲ್ಲ ಎಂದ ಮಹಿಳೆ, ಥಿಯೇಟರ್ ಮುಂದೆ ಯುವತಿಗೆ ನಿಂದನೆ: ಕ್ಷಮೆ ಕೇಳಿದ ರಾಜ್ ಬಿ ಶೆಟ್ಟಿ

    ಬೆಂಗಳೂರು ಆಗಸ್ಟ್ 26: ಟೋಬಿ ಸಿನಿಮಾ ಚೆನ್ನಾಗಿಲ್ಲ ಎಂದು ಯುವತಿಯೊಬ್ಬಳು ಥಿಯೇಟರ್ ಮುಂದೆ ಹೇಳಿದ ಕಾರಣಕ್ಕಾಗಿ ಯುವಕನೊಬ್ಬ ಆ ಹುಡುಗಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ಆ ಹುಡುಗಿ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಕ್ಕಾಗಿ ಥಿಯೇಟರ್ ನಿಂದ ಆಚೆ ಹೊರಡು ಎಂದು ಬೆದರಿಸಿದ್ದ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು.

    ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಿತ್ರದ ಕಥೆ ಬರೆದ ಟಿ.ಕೆ. ದಯಾನಂದ್ ಕ್ಷಮೆ ಯಾಚಿಸಿದ್ದರು. ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ದಯಾನಂದ್, ಆ ಹುಡುಗ ತಮ್ಮ ತಂಡದವನು ಅಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು. ಆದರೂ ತಂಡದ ಪರವಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದರು. ಇದೀಗ ರಾಜ್ ಬಿ ಶೆಟ್ಟಿ ಕೂಡ ಕ್ಷಮೆ ಕೇಳಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ ಕೂಡ ವಿಮರ್ಶೆ ಮಾಡುವ ಮಾಧ್ಯಮ. ಸಾವಿರಾರು ಕೋಟಿ ರೂಪಾಯಿ ಗಳಿಸಿದ ಸಿನಿಮಾಗಳು ಕೂಡ ಕೆಲವರಿಗೆ ಇಷ್ಟವಾಗಿರುವುದಿಲ್ಲ. ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಹಕ್ಕು ಇದೆ. ಯಾರನ್ನೂ ನಿಂದಿಸಬಾರದು. ಆ ಯುವತಿಗೆ ಬೈದ ಹುಡುಗ ನಮ್ಮ ತಂಡದವನು ಅಲ್ಲ. ಆದರೂ, ನಾನು ಮನಸಾರೆ ಆ ಹುಡುಗಿಗೆ ಕ್ಷಮೆ ಕೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಟೋಬಿ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಹಲವರು ಹಲವು ರೀತಿಯಲ್ಲಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ನಡುವೆ ಇಂಥದ್ದೊಂದು ಘಟನೆ ನಡೆದು, ಚಿತ್ರತಂಡವನ್ನು ಮುಜುಗರಕ್ಕೀಡು ಮಾಡಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply