LATEST NEWS
ಕೊಲ್ಲಂ – ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಎಫ್ ಡಿ ಹಣಕ್ಕಾಗಿ ಗ್ಯಾಂಗ್ ಕಟ್ಟಿಕೊಂಡು ಕೊಲೆ ಮಾಡಿಸಿದ ಬ್ಯಾಂಕ್ ಮ್ಯಾನೆಜರ್ ಸರಿತಾ
ಕೊಲ್ಲಂ ಅಗಸ್ಟ್ 12: ಕೊಲ್ಲಂ ನಲ್ಲಿ ಇತ್ತೀಚೆಗೆ ನಡೆದ ಸೈಕಲ್ ಸವಾರನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ನಿವೃತ್ತ ಸರಕಾರಿ ಉದ್ಯೋಗಿಯಾಗಿರುವ ಮೃತ ವ್ಯಕ್ತಿಯ ಬ್ಯಾಂಕ್ ನಲ್ಲಿದ್ದ 90 ಲಕ್ಷ ಹಣಕ್ಕಾಗಿ ಮಹಿಳಾ ಬ್ಯಾಂಕ್ ಮ್ಯಾನೆಜರ್ ಆತನನ್ನು ಕೊಲೆ ಮಾಡಿಸಿರುವುದಾಗಿ ತಿಳಿದು ಬಂದಿದ್ದು. ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಬಿಎಸ್‌ಎನ್‌ಎಲ್‌ನ ನಿವೃತ್ತ ವಿಭಾಗೀಯ ಇಂಜಿನಿಯರ್ ಸಿ ಪಪ್ಪಚನ್ ಎಂದು ಗುರುತಿಸಲಾಗಿದ್ದು. ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಸರಿತಾ ಕೊಲೆಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಪಪ್ಪಚನ್ ಅವರು ತಮ್ಮ ನಿವೃತ್ತಿಯಿಂದ ಬಂದ ಹಣವನ್ನು ಸರಿತಾ ಅವರು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿ ಠೆವಣಿ ಇಟ್ಟಿದ್ದರು. ಇತ್ತೀಚಗೆ ಠೇವಣಿ ಇಟ್ಟಿದ್ದ ಹಣದ ಬಡ್ಡಿ ಸರಿಯಾಗಿ ಬರುತ್ತಿಲ್ಲ ಎಂದು ಪಪ್ಪಚನ್ ಅವರು ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸಿದಾಗ 40 ಲಕ್ಷ ರೂಪಾಯಿ ಹಣ ನಾಪತ್ತೆಯಾಗಿರುವುದು ಕಂಡು ಬಂದಿತ್ತು. ಈ ಬಗ್ಗೆ ಬ್ಯಾಂಕ್ ಮ್ಯಾನೆಜರ್ ಸರಿತಾ ಅವರನ್ನು ಪ್ರಶ್ನಿಸಿದಾಗ ಆಕೆ ಇದರ ಬಗ್ಗೆ ಇನ್ನೊಂದು ದಿನ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಬಳಿಕ ಪಪ್ಪಚನ್ ಕೊಲೆ ಮಾಡಲು ಸುಫಾರಿ ಕಿಲ್ಲರ್ ನೇಮಿಸಿದ ಸರಿತಾ ಪಪಚ್ಚನ್ ಸೈಕಲ್ ನಲ್ಲಿ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆಸಿ ಅಪಾಘಾತ ಮಾಡಿಸಿದ್ದಾರೆ. ಈ ಮೊದಲು ಅಪಘಾತ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಮತ್ತಷ್ಟು ವಿಚಾರ ತಿಳಿದು ಬಂದಿದೆ. ಪಪ್ಪಚನ್ ಕೊಲೆ ಮಾಡಲು ಸರಿತಾ ಸುಫಾರಿ ಕೊಲೆಗಾರ ಅನಿಮೋನ್ ನೇಮಿಸಿಕೊಂಡಿದ್ದಾಳೆ. ಮೇ 26ರಂದು ಅನಿಮೋನ್ ಚಲಾಯಿಸುತ್ತಿದ್ದ ಕಾರಿನಿಂದ ಹತ್ಯೆ ಮಾಡಲಾಗಿತ್ತು. ಪಪ್ಪಚ್ಚನ ಸಾವನ್ನು ರಸ್ತೆ ಅಪಘಾತ ಎಂದು ಬರೆದುಕೊಡಲು ತನಿಖೆ ನಡೆಸುತ್ತಿರುವಾಗಲೇ ಚಕಿತಗೊಳಿಸುವ ವಿವರಗಳು ಹೊರಬಿದ್ದಿವೆ.
ಐದು ವರ್ಷಗಳ ಹಿಂದೆ ಸಂಸ್ಥೆಯೊಂದರಲ್ಲಿ ಸಹೋದ್ಯೋಗಿಗಳಾಗಿದ್ದರು. ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅವರು ಆಟೋರಿಕ್ಷಾ ಚಾಲಕ ಮಾಹೀನ್‌ನನ್ನು ಕರೆದೊಯ್ದರು. ಅನಿಮೋನ್ ಮತ್ತು ಆತನ ತಂಡವು ಮೇ 16 ರಂದು ಮೊದಲ ಬಾರಿಗೆ ಸರಿತಾಳನ್ನು ಭೇಟಿ ಮಾಡಿತು, ಈ ಗ್ಯಾಂಗ್ ಆರಂಭದಲ್ಲಿ ಪಪ್ಪಚನನ್ನು ಆಟೋರಿಕ್ಷಾದಿಂದ ಅಪಘಾತ ಮಾಡಿ ಕೊಲೆ ಮಾಡಲು ಯೋಚಿಸಿತ್ತು, ಆದರೆ ಮಳೆಯಿಂದಾಗಿ ಅದು ಕಾರ್ಯಗತವಾಗಿರಲಿಲ್ಲ. ಬಳಿಕ ಮತ್ತೆ ಎರಡು ಬಾರಿ ಪ್ರಯತ್ನಿಸಿದರೂ ಕಾರ್ಯಗತವಾಗಿರಲಿಲ್ಲ. ಇದು ಸರಿತಾ ಅವರನ್ನು ಕೆರಳಿಸಿತ್ತು. ಅವರು ಅನಿಮೋನನ್ನು ಸಂಪರ್ಕಿಸಿ, ಪಪ್ಪಚನ ಕೊಲೆ ಮಾಡಲು ಆಗದಿದ್ದರೆ ಬೆರೆಯವರಿಗೆ ಹೇಳುತ್ತೇನೆ ಎಂದು ಹೇದರಿಸಿದ್ದಳು. ಈ ವೇಳೆ ಅನಿಮೋನ್ ಈಗ ರಿಮಾಂಡ್‌ನಲ್ಲಿರುವ ಹಾಶಿಫ್‌ನಿಂದ ಕಾರನ್ನು ತೆಗೆದುಕೊಂಡಿದ್ದಾನೆ.
ಬಳಿಕ ಆರೋಪಿ ಅನೂಪ್ ಮೇ 23ರಂದು ಮಧ್ಯಾಹ್ನ ಸರಿತಾ ಜತೆ ಚಹಾ ಸೇವಿಸುವ ನೆಪದಲ್ಲಿ ಅವರನ್ನು ಮನೆಯಿಂದ ಕರೆದಿದ್ದರು. ಈ ವೇಳೆ ಸೈಕಲ್ ನಲ್ಲಿ ಸರಿತಾ ಮನಗೆ ಹೊರಟಿದ್ದರು. ಶ್ರೀ ನಾರಾಯಣ ಸಾಂಸ್ಕೃತಿಕ ಸಮುಚ್ಚಯದ ಮುಂದೆ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅನಿಮೋನ್ ಕಾರಿನಿಂದ ಪಪ್ಪಚ್ಚನ್ ಸೈಕಲ್ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಪಪ್ಪಚ್ಚನ ಮೇಲೆ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪಪ್ಪಚ್ಚನನ್ನು ಸ್ಥಳೀಯರ ಆಸ್ಪತ್ರೆಗೆ ಸೇರಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಪಪ್ಪಚನ್ ಸಾವಿನ ನಂತರ ಅನಿಮೋನ್, ಹಾಶಿಫ್ ಮತ್ತು ಮಾಹೀನ್ ಸರಿತಾಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಇನ್ನೂ ಹೆಚ್ಚಿನ ಹಣಕ್ಕಾಗಿ ಬ್ಲ್ಯಾಕ್ ಮೇಲೆ ಮಾಡಲು ಆರಂಭಿಸಿದ ಆರೋಪಿಗಳು, ಹಣ ಕೊಡದಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೆದರಿಸಿದ್ದರು. ಈ ವೇಳೆ ಸರಿತಾ ಮೂವರೊಂದಿಗೆ ಸುಮಾರು 19 ಲಕ್ಷ ರೂ.ಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು.
ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಮೊದಲು ಇದು ಅಪಘಾತ ಎಂದು ತಿಳಿದುಕೊಂಡಿದ್ದರು, ಆದರೆ ಸಿಸಿಟಿವಿ ಪರಿಶೀಲನೆ ವೇಳೆ ಅನುಮಾನ ಬಂದು ತನಿಖೆ ಪ್ರಾರಂಭಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.