FILM
ನಾನಿಗಲೂ ವಿವಾಹಿತ – ಡೈವೋರ್ಸ್ ವದಂತಿಗೆ ಪುಲ್ ಸ್ಟಾಪ್ ಇಟ್ಟ ಅಭಿಷೇಕ ಬಚ್ಚನ್
ನವದೆಹಲಿ ಅಗಸ್ಟ್ 12: ಅಭಿಷೇಕ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಡೈವೋರ್ಸ್ ವದಂತಿಗಳಿಗೆ ಇದೀಗ ಅಭಿಷೇಕ್ ಪ್ರತಿಕ್ರಿಯಿಸಿದ್ದು, ನಾನಿಗಲೂ ವಿವಾಹಿತ ಎಂದು ಹೇಳುವ ಮೂಲಕ ಡೈವೋರ್ಸ್ ಕೇವಲ ವದಂತಿ ಎಂದು ಹೇಳಿದ್ದಾರೆ.
Bollywood UK Media ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, “ನಾನೀಗಲೂ ವಿವಾಹಿತ. ಈ ಕುರಿತು ನಾನು ಹೆಚ್ಚೇನನ್ನೂ ಹೇಳಲು ಬಯಸುವುದಿಲ್ಲ. ನೀವು ಈ ವಿಷಯವನ್ನು ಅತಿರಂಜಿತವಾಗಿ ವರದಿ ಮಾಡುತ್ತಿದ್ದೀರಿ. ಇದು ನಿಜಕ್ಕೂ ದುಃಖಕರ. ನೀವಿದನ್ನು ಯಾಕೆ ಮಾಡುತ್ತೀರಿ ಎಂಬುದು ನನಗೆ ತಿಳಿದಿದೆ. ನೀವು ಕೆಲವು ಸುದ್ದಿಗಳನ್ನು ನೀಡಬೇಕಾಗುತ್ತದೆ. ನಾವು ಸೆಲೆಬ್ರಿಟಿಗಳಾದ್ದರಿಂದ ಇಂತಹ ಸುದ್ದಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ” ಎಂದು ತಮ್ಮ ವಿವಾಹದ ಉಂಗುರವನ್ನು ಪ್ರದರ್ಶಿಸಿ ಹೇಳಿದ್ದಾರೆ ಎಂದು The Times Of India ವರದಿ ಮಾಡಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಅದರ ಬಗ್ಗೆ ನಾನು ನಿಮಗೆ ಹೇಳಲು ಏನೂ ಇಲ್ಲ. ನೀವೆಲ್ಲರೂ ಸುದ್ದಿಗಳನ್ನು ಈಗಾಗಲೇ ಹೊರಹಾಕಿದ್ದೀರಿ. ನೀವು ಅದನ್ನು ಏಕೆ ಮಾಡುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನೀವು ಕೆಲವು ಸುದ್ದಿಗಳನ್ನು ಫೈಲ್ ಮಾಡಬೇಕಾಗುತ್ತದೆ. ಪರವಾಗಿಲ್ಲ, ನಾವು ಸೆಲೆಬ್ರಿಟಿಗಳು, ನಾವು ಅದನ್ನು ತೆಗೆದುಕೊಳ್ಳಲೇಬೇಕು” ಎಂದಿದ್ದಾರೆ.
You must be logged in to post a comment Login