LATEST NEWS
ಮಂಗಳೂರು ನಗರದಲ್ಲಿ ಪ್ರತ್ಯಕ್ಷವಾದ ಕಾಡುಕೋಣ

ಮಂಗಳೂರು ನಗರದಲ್ಲಿ ಪ್ರತ್ಯಕ್ಷವಾದ ಕಾಡುಕೋಣ
ಮಂಗಳೂರು ಮೇ.5: ಮಂಗಳೂರು ನಗರದಲ್ಲಿ ಇಂದು ಕಾಡು ಕೋಣನೊಂದು ಪ್ರತ್ಯಕ್ಷವಾಗಿದೆ. ಇಂದು ಮುಂಜಾನೆ ನಗರದ ಹ್ಯಾಟ್ ಹಿಲ್ ಬಳಿ ಕಾಣ ಸಿಕ್ಕಿದ್ದ ಕಾಡುಕೋಣ ಬಳಿಕ ನಗರದ ರಥಬೀದಿಯಲ್ಲಿ ಬಳಿಕ ಗುಜರಾತಿ ಶಾಲೆಯ ಬಳಿ ಕಾಣಸಿಕ್ಕಿದೆ. ಏಕಾಏಕಿ ನಗರದ ಮಧ್ಯದಲ್ಲಿ ಕಾಡು ಕೋಣ ಕಂಡ ಸ್ಥಳೀಯರು ಭಯಭೀತರಾಗಿದ್ದು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಪ್ರಸ್ತುತ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಕಾಡು ಕೋಣ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಒಂಟಿ ಕಾಡು ಕೋಣ ಅಪಾಯಕಾರಿಯಾಗಿದ್ದು ಕೆಲ ವರ್ಷಗಳ ಹಿಂದೆ ಬಜ್ಜೆ ವಿಮಾನ ನಿಲ್ದಾಣದ ಬಳಿ ಕಾಣ ಸಿಕ್ಕಿದ್ದವು. ಬಜ್ಪೆ, ಅದ್ಯಪಾಡಿ ವಿಮಾನ ನಿಲ್ದಾಣದ ಸುತ್ತ ಮುತ್ತಾ ಆನೇಕ ಕಾಡುಕೋಣಗಳಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ದೂರದ ಆ ಪ್ರದೇಶದಿಂದ ನಗರಕ್ಕೆ ಬಂದ ಬಗ್ಗೆ ಅಚ್ಚರಿ ಮತ್ತು ಆತಂಕ ಎರಡೂ ಉಂಟಾಗಿದ್ದು,

ಕೊರೊನಾದಿಂದ ಕಳೆದ 40 ದಿನಗಳಿಂದ ಲಾಕ್ ಡೌನ್ ಇದ್ದ ಕಾರಣ ಜನ – ವಾಹನಗಳ ಒಡಾಟವಿರದ ಕಾರಣ ಕಾಡು ಪ್ರಾಣಿಗಳು ಸಹಜವಾಗಿ ಅತ್ತಿಂದ ಈಚೆಗೆ ವಲಸೆ ಹೋಗುವುದು ಸಹಜ. ಇದೇ ಹಿನ್ನೆಲೆಯಲ್ಲಿ ಕಾಡಿನಲ್ಲಿದ್ದ ಕೋಣ ಇದೀಗ ನಾಡಿಗೆ ಬಂದು ಸೇರಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.