ತುಂಬೆ ಹಾಗೂ ಸಂಪ್ಯದಲ್ಲಿ ವಿಧಿಸಿದ್ದ ಸೀಲ್ ಡೌನ್ ತೆರವು

ಮಂಗಳೂರು ಮೇ.04: ಕೊರೊನಾ ಸೊಂಕಿನ ಕಾಣಿಸಿಕೊಂಡ ಹಿನ್ನೆಲೆ ಕಳೆದ 1 ತಿಂಗಳಿನಿಂದ ಸೀಲ್ ಡೌನ್ ಆಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಎರಡು ಪ್ರದೇಶಗಳನ್ನು ಸೀಲ್‌ಡೌನ್‌ನಿಂದ ಮುಕ್ತಗೊಳಿಸಲಾಗಿದೆ.

ಈ ಎರಡು ಪ್ರದೇಶಗಳಲ್ಲಿದ್ದ ಸೀಲ್ ಡೌನ್ ಆದೇಶವನ್ನು ಜಿಲ್ಲಾಡಳಿತ ಹಿಂದಕ್ಕೆ ಪಡೆದಿದೆ. ಬಂಟ್ವಾಳದ ತುಂಬೆಯ ರೋಗಿ ಸಂಖ್ಯೆ 146 ಮತ್ತು ಸಂಪ್ಯದ ರೋಗಿ ಸಂಖ್ಯೆ 106 ಗುಣಮುಖರಾಗಿದ್ದು ಇವರ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ 28 ದಿನಗಳು ಕಳೆದಿದ್ದು ಸಂಪರ್ಕದಲ್ಲಿದ್ದವರ ಎಲ್ಲರ ವರದಿಗಳು ನೆಗೆಟಿವ್ ಬಂದ ಹಿನ್ನಲೆಯಲ್ಲಿ ಎರಡು ಪ್ರದೇಶಗಳನ್ನು ಸೀಲ್ ಡೌನ್ ಮುಕ್ತಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಆದೇಶಿಸಿದ್ದಾರೆ.

ಇನ್ನು ಈ ಸೀಲ್‌ ತೆರವು ವಿಚಾರವಾಗಿ ಅಧಿಕಾರಿಗಳ ಸಭೆಯನ್ನು ಕರೆದಿದ್ದ ಶಾಸಕ ಯು.ಟಿ. ಖಾದರ್ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ತರಾಟೆಗೆ ತಗೊಂಡಿದ್ದರು. ಸೀಲ್ ಡೌನ್ ಮಾಡಲು ಇರುವ ಆತುರ ನಿಯಮನುಸಾರ ಸೀಲ್ ಡೌನ್ ತೆರೆಯಲು ಮುಂದಾಗುವುದಿಲ್ಲ ಏಕೆ? ಎಂದು ಪ್ರಶ್ನಿಸಿದ್ದರು.