LATEST NEWS
ಸಂಸದೆಯಾಗಿ ನಿಮಗೆ ಕ್ಷೇತ್ರದ ಬಗ್ಗೆ ಗೊತ್ತಿಲ್ವೆ….ವೈರಲ್ ಆದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆಡಿಯೋ
ಸಂಸದೆಯಾಗಿ ನಿಮಗೆ ಕ್ಷೇತ್ರದ ಬಗ್ಗೆ ಗೊತ್ತಿಲ್ವೆ….ವೈರಲ್ ಆದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆಡಿಯೋ
ಉಡುಪಿ ಮೇ.5: ಉಡುಪಿ ಜಿಲ್ಲೆಯ ಲಾಕ್ ಡೌನ್ ಬಗ್ಗೆ ನನಗೇನು ತಿಳಿದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿರುವ ಆಡಿಯೋ ಒಂದು ಈಗ ವೈರಲ್ ಆಗಿದೆ.
ಈಗಾಗಲೇ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ಬಾರದೇ ಬೆಂಗಳೂರಿನಲ್ಲೇ ಇರುತ್ತಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅವರು ಕಾಣೆಯಾಗಿದ್ದರೆ ಎಂಬ ಶೀರ್ಷಿಕೆಯಡಿ ಫೊಟೊಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಾಕಿ ವೈರಲ್ ಮಾಡುತ್ತಿದ್ದಾರೆ.
ಇದೀಗ ಅವರ ಆಡಿಯೋ ಕೂಡ ವೈರಲ್ ಆಗಿದೆ. ಉಡುಪಿ ಜಿಲ್ಲೆಯ ನಾಗರೀಕರೋರ್ವರ ಜೊತೆ ಸಂಸದೆ ಮಾತುಕತೆ ಆಡಿಯೋ ವೈರಲ್ ಆಗಿದೆ. ಲಾಕ್ ಡೌನ್ ನಿಯಮದ ಬಗ್ಗೆ ಆ ವ್ಯಕ್ತಿ ವಿಚಾರಿಸಿದಾಗ ನನಗೆ ಏನು ಸರಿಯಾಗಿ ತಿಳಿದಿಲ್ಲ ಎಂದು ಸಂಸದೆ ಉತ್ತರ ಕೊಟ್ಟಿದ್ದಾರೆ. ಮಾಧ್ಯಮದಲ್ಲಿ ಒಂದು ಮಾಹಿತಿ ಬರ್ತಾ ಇದೆ…. ಡಿಸಿ ಹೀಗೆ ಹೇಳ್ತಾ ಇದ್ದಾರೆ… ನೀವು ಸಂಸದೆ ಅಲ್ವಾ ಇದರ ಬಗ್ಗೆ ಮಾಹಿತಿ ಇಲ್ವಾ… ಎಂದು ಅ ವ್ಯಕ್ತಿ ಕೇಳಿದಾಗ, ನಾನು ತಿಳ್ಕೋತೆನೆ ನೀವು ತಿಳ್ಕೊಳ್ಳಿ ಎಂದು ಸಂಸದೆ ಆ ವ್ಯಕ್ತಿಗೆ ತಿರುಗೇಟು ನೀಡಿದ್ದಾರೆ. ಸಂಸದೆಯಾಗಿ ನಿಮಗೆ ಕ್ಷೇತ್ರದ ಬಗ್ಗೆ ಗೊತ್ತಿಲ್ವೆ ನಿಮ್ಮ ಅಲ್ವಾ ಸರಕಾರ ಇರೋ ರಾಜ್ಯದಲ್ಲಿ ಎಂದರೆ ಯಾವ ಸರಕಾರ ಆದ್ರೆ ಏನು..? ನೋಡ್ಕೊಂಡು ತಿಳ್ಕೊಳ್ಳಿ..? ಎಂದು ಸಂಸದೆ ಉತ್ತರ ಕೊಟ್ಟ ಆಡಿಯೋ ವೈರಲ್ ಆಗಿದೆ.
You must be logged in to post a comment Login