BANTWAL
ಬಂಟ್ವಾಳ ಬಾವಿಗೆ ಬಿದ್ದ 2 ವರ್ಷದ ಚಿರತೆ

ಬಂಟ್ವಾಳ ಬಾವಿಗೆ ಬಿದ್ದ 2 ವರ್ಷದ ಚಿರತೆ
ಬಂಟ್ವಾಳ ಎಪ್ರಿಲ್ 20: ಕೊರೊನಾ ಲಾಕ್ ಡೌನ್ ನ ಮಧ್ಯೆ ಚಿರತೆಯೊಂದು ಬಾವಿಗೆ ಬಿದ್ದು ಮೇಲಕ್ಕೆ ಬರಲಾಗದೆ ಹೊರಳಾಡುತ್ತಿದ್ದ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ಮಜಿ ಎಂಬಲ್ಲಿ ನಡೆದಿದೆ.
ಮಜಿ ಮೋನಪ್ಪ ಎಂಬವರ ಜಮೀನಿನಲ್ಲಿ ರುವ ಸುಮಾರು 6 ಅಡಿ ಆಳವಾದ ಬಾವಿಗೆ ರಾತ್ರಿ ಹೊತ್ತಿನಲ್ಲಿ ಚಿರತೆ ಬಿದ್ದಿತ್ತು.ರಾತ್ರಿ ಹೊತ್ತಿನಲ್ಲಿ ಬಾವಿ ಕಾಣದೆ ಒಳಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ. ಕೊನೆಗೆ ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೋಲೀಸರು ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
