Connect with us

    LATEST NEWS

    ಅಜಾನ್ ನಿಷೇಧಿಸಲು ಸಲ್ಲಿಸಿದ್ದ ಪಿಐಎಲ್ ವಜಾ ಮಾಡಿದ ಗುಜರಾತ್ ಹೈಕೋರ್ಟ್ – ಆಜಾನ್‌ನಿಂದ ಶಬ್ದದ ಡೆಸಿಬಲ್ ಎಷ್ಟು? ಹಬ್ಬಗಳಲ್ಲಿ ಬಳಸುವ ಡಿಜೆ ಶಬ್ದದ ಡೆಸಿಬಲ್ ಎಷ್ಟು ನ್ಯಾಯಾಧೀಶರ ಪ್ರಶ್ನೆ

    ಗುಜರಾತ್ ನವೆಂಬರ್ 29: ಅಜಾನ್ ನಿಷೇಧಿಸಿ ಎಂದು ಗುಜರಾತ್ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ದಿನದ ನಿರ್ದಿಷ್ಟ ಸಮಯದಲ್ಲಿ ಹತ್ತು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆಸುವ ಅಜಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತದೆ ಎಂಬ ತನ್ನ ವಾದವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.


    ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಗಾಂಧಿನಗರ ಮೂಲದ ವೈದ್ಯ ಧರ್ಮೇಂದ್ರ ಪ್ರಜಾಪತಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಈ ವೇಳೆ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುನಿತಾ ಅಗರವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಮಯೀ ಅವರ ಪೀಠವು ರಾಜ್ಯಾದ್ಯಂತ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ತಿರಸ್ಕರಿಸಿತು.

    ಅಜಾನ್‌ಗಾಗಿ ವಿವಿಧ ಸಮಯಗಳಲ್ಲಿ ಮಸೀದಿಯಲ್ಲಿ ಧ್ವನಿವರ್ಧಕಗಳ ಬಳಕೆಯು ಹತ್ತು ನಿಮಿಷಗಳು ಅಥವಾ ಅದಕ್ಕಿಂತ ಕಡಿಮೆಯಿರುತ್ತದೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ, ಬೆಳಿಗ್ಗೆ ಧ್ವನಿವರ್ಧಕದ ಮೂಲಕ ಅಜಾನ್ ಅನ್ನು ಕರೆಯುವ ಮಾನವ ಧ್ವನಿಯು ಶಬ್ದ ಮಾಲಿನ್ಯವನ್ನು ಹೆಗೆ ಸೃಷ್ಠಿಸುತ್ತದೆ ಎಂದು ನ್ಯಾಯಾಲಯವು ಅರ್ಜಿದಾರರನ್ನು ಪ್ರಶ್ನಿಸಿತು. ಅನುಮತಿಸುವ ಡೆಸಿಬಲ್ ಗಳನ್ನು ಮೀರಿ ಅಜಾನ್ ಶಬ್ದ ಮಾಲಿನ್ಯವನ್ನು ಹೇಗೆ ಉಂಟುಮಾಡುತ್ತದೆ ಎಂಬುದರ ವೈಜ್ಞಾನಿಕ ದಾಖಲೆಯೊಂದಿಗೆ ಅರ್ಜಿದಾರರು ಬರಬೇಕು ಎಂದು ನ್ಯಾಯಾಲಯವು ಮೂಲಭೂತವಾಗಿ ಅಭಿಪ್ರಾಯಪಟ್ಟಿದೆ .

    ನಾವು ಮನೆಗಳಲ್ಲಿ ನುಡಿಸುವ ಸಂಗೀತದ ಬಗ್ಗೆ ಮಾತನಾಡುತ್ತಿಲ್ಲ. ನೀವು ದೇವಸ್ಥಾನದಲ್ಲಿ ಭಜನೆ ಅಥವಾ ಆರತಿಗಾಗಿ ಜೋರಾಗಿ ಸಂಗೀತವನ್ನು ನುಡಿಸುತ್ತೀರಿ. ಅದು ಜನರಿಗೆ ತೊಂದರೆ ಉಂಟುಮಾಡುವುದಿಲ್ಲವೇ? ಆಜಾನ್ ಹೇಗೆ ತೊಂದರೆ ಉಂಟುಮಾಡುತ್ತದೆ? ಇದು ಇಡೀ ದಿನದಲ್ಲಿ ಹತ್ತು ನಿಮಿಷಗಳ ಕಾಲ ಕೂಗಬಹುದು. ಇದರಿಂದ ಶಬ್ದ ಮಾಲಿನ್ಯ ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಮರು ಪ್ರಶ್ನೆ ಹಾಕಿದರು. ಆಜಾನ್‌ನಿಂದ ಶಬ್ದದ ಡೆಸಿಬಲ್ ಎಷ್ಟು? ಹಬ್ಬಗಳಲ್ಲಿ ಬಳಸುವ ಡಿಜೆ ಶಬ್ದದ ಡೆಸಿಬಲ್ ಎಷ್ಟು ಎಂದು ಕೇಳಿದ ಸಿಜೆ ಅಗರ್ವಾಲ್ ಉತ್ತರ ನೀಡಿದ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು. ಆಜಾನ್ ನಂಬಿಕೆ. ಈ ಅಭ್ಯಾಸವು ವರ್ಷಗಳಿಂದ ಒಟ್ಟಿಗೆ ನಡೆಯುತ್ತಿದೆ. ಇಂತಹ ಅರ್ಜಿಗಳನ್ನು ನಾವು ಮಾನ್ಯ ಮಾಡುವುದಿಲ್ಲ ಎಂದು ತಿಳಿಸಿದರು. ಅದಾಗ್ಯೂ ವಾದ ಮುಂದುವರಿಸಿದ ವಕೀಲರು ಆಜಾನ್ ದೇವಾಲಯಗಳಲ್ಲಿ ಆರತಿಗಿಂತ ಭಿನ್ನವಾಗಿದೆ. ಇದು ದಿನಕ್ಕೆ ಐದು ಬಾರಿ ನಡೆಯುತ್ತದೆ ಎಂದು ವಕೀಲರು ಒತ್ತಿ ಹೇಳಿದರು.

    ಇದಕ್ಕೆ ಗರಂ ಆದ ಸಿಜೆ ಅಗರ್ವಾಲ್, ಹಾಗಾದರೆ ನಿಮ್ಮ ದೇವಸ್ಥಾನಗಳಲ್ಲಿ ಮುಂಜಾನೆ ಪ್ರಾರಂಭವಾಗುವ ಆ ಡೋಲು ಮತ್ತು ಸಂಗೀತದೊಂದಿಗೆ ಬೆಳಗಿನ ಆರತಿ ಇದು ಯಾರಿಗೂ ಯಾವುದೇ ಶಬ್ದ ಅಥವಾ ಗದ್ದಲವನ್ನು ಉಂಟುಮಾಡುವುದಿಲ್ಲವೇ? ಇದು ಪ್ರತಿ ನಿತ್ಯ ನಡೆಯುತ್ತದೆ. ಇದು ಶಬ್ದ ಮಾಲಿನ್ಯ ಮಾಡುವುದಿಲ್ಲ ಎಂದು ನೀವು ಹೇಳಬಹುದೇ ಎಂದು ಒತ್ತಿ ಕೇಳಿದರು. ಬಳಿಕ ಆಜಾನ್ ದಿನವಿಡೀ ಕೇವಲ 10 ನಿಮಿಷಗಳ ಕಾಲ ನಡೆಯುತ್ತದೆ ಮತ್ತು ಯಾವುದೇ ಮಾಲಿನ್ಯವನ್ನು ಉಂಟುಮಾಡುವುದಿಲ್ಲ ಎಂದು ಪೀಠವು ಪುನರುಚ್ಚರಿಸಿತು.

    Share Information
    Advertisement
    Click to comment

    You must be logged in to post a comment Login

    Leave a Reply