Connect with us

DAKSHINA KANNADA

ರಾಮಮಂದಿರ ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ದಾಂಧಲೆ – ಮೂವರು ಆರೋಪಿಗಳು ಆರೆಸ್ಟ್

ಮಂಗಳೂರು ಮಾರ್ಚ್ 5: ವಾಟ್ಸಪ್ ಸ್ಟೇಟಸ್ ವಿಚಾರಕ್ಕೆ ಯುವಕರ ತಂಡವೊಂದು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ನೆಕ್ಕಿಲಾಡಿ ನಿವಾಸಿಗಳಾದ ನೌಷಾದ್, ಮಹಮ್ಮದ್ ಫಯಾಝ್ ಹಾಗೂ ರಫೀಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮಾರ್ಚ್ 2 ರಂದು ರಾತ್ರಿ 11 ಗಂಟೆ ಸುಮಾರಿಗೆ ಉಬೈದ್ ಹಾಗೂ ಐದಾರು ಮಂದಿ ಸೇರಿ ಉಪ್ಪಿನಂಗಡಿ ಆದರ್ಶನಗರ ನಿವಾಸಿ ಮುಕುಂದ ಎಂಬುವರ ಮನೆ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕಾರಿಗೆ ಹಾನಿ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.


ಮಾಧ್ಯಮಗಳೊಂದಿಗೆ ಮಾತನಾಡಿದ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಒಂದೂವರೆ ತಿಂಗಳ ಹಿಂದೆ ಮುಕುಂದ ಹಾಗೂ ಉಬೈದ್ ಮಧ್ಯೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಸ್ಟೇಟಸ್ ಹಾಕಿಕೊಂಡಿರುವ ಕಾರಣಕ್ಕೆ ವಾದ ನಡೆದಿತ್ತು. ಇದೇ ಕಾರಣಕ್ಕೆ ಉಬೈದ್ ತಂಡ ಕಟ್ಟಿಕೊಂಡು ಬಂದು ದಾಂದಲೆ ನಡೆಸಿದ್ದಾನೆಂದು ದೂರು ದಾಖಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ವಶಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.